ಮಂಗಳೂರು ಜ. ೨೯ : ನಗರದ ಕೊಡಿಯಲ್ ಬೈಲ್ ಪ್ರದೇಶದ ಪಿವಿಎಸ್. ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ಶ್ರೀಕೃಷ್ಣ ಪ್ರಜ್ಞಾ ಧಾರ್ಮಿಕ ಸಂಸ್ಥೆಯ (ISಏಅಔಓ ಇಸ್ಕಾನ್) ಆಶ್ರಯದಲ್ಲಿ “ಅನ್ನಶ್ರೀ” ನಿತ್ಯ ಅನ್ನದಾನ ಯೋಜನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಗುಣಕರ ರಾಣದಾಸರು ತಾ.೨೯.೦೧.೨೦೨೩ ರಂದು ದೇವಾಲಯ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.

ತಮ್ಮ ಉದ್ಘಾಟನಾ ಭಾಷಣದಲ್ಲಿ ಇಂದಿನ ಯುವ ಜನತೆ ಆಧುನಿಕತೆ ಮತ್ತು ಪಾಶ್ಚಿಮಾತ್ಯ ಜೀವನ ಶೈಲಿಗೆ ಮರುಳು ಹೋಗಿದ್ದು ಅವರಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ ಅರಿವು ಮೂಡಿಸುವ ಮೌಲ್ಯಧಾರಿತ ಶಿಕ್ಷಣ ಸಮರ್ಥವಾಗಿ ನಿರ್ವಹಿಸುವ ಶೈಕ್ಷಣಿಕ ಜವಬ್ದಾರಿ ನಮ್ಮನ್ನು ಅವಲಂಬಿಸಿದೆ ಎಂದು ನುಡಿದರು. ಇಸ್ಕಾನ್ ಸಂಸ್ಥೆಯ ಸಲ್ಲಿಸುವ ಸಮಾಜಸೇವೆ, ಶೈಕ್ಷಣಿಕ ಸೇವೆಗಳ ಸಂಕ್ಷಿಪ್ತ ವರದಿ ನೀಡಿ ಅನ್ನಶ್ರೀ ನಿತ್ಯ ಅನ್ನದಾನ ಕಾರ್ಯಕ್ರಮವು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುವ ಹಾಗೂ ಅವರಿಗೆ ಸಹಾಯಕರಿಗಾಗಿ ಸೇವೆ ಸಲ್ಲಿಸುವವರಿಗೆ ಹಾಗು ಮಂದಿರದ ಭಕ್ತಾದಿಗಳಾಗಿ ಅನ್ನದಾನ ಉಚಿತವಾಗಿ ಪ್ರಾಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಮ್ಮ ಕುಡ್ಲ ದೃಶ್ಯ ಮಾಧ್ಯಮ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಲೀಲಾಕ್ಷ ಕರ್ಕೇರವರು ಇಸ್ಕಾನ್ ಸಂಸ್ಥೆಯ ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜಸೇವೆ ಅಮೂಲ್ಯ ಮತ್ತು ಅಪಾರ ಎಂದು ನುಡಿದು ಸಂಸ್ಥೆ ನೂತನವಾಗಿ ಪ್ರಾರಂಭಿಸಿದ ಚಿಣ್ಣರ ಗೋಕುಲ್ ಶಾಲೆಗೆ ಚಾಲನೆ ನೀಡಿದರು.
ಗೌರವ ಅತಿಥಿಯಾಗಿ ಮುಂಬಯಿ ನಗರ ಮೂಲದ ವಾಣಿಜ್ಯೋದ್ಯಮಿ ಸಂಜಯ ಮೋರೆ, ನಗರದ ಪ್ಲಾನ್‌ಟೆಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಆಭಯ ಮತ್ತು ವೈದ್ಯೆ ಡಾ| ಆಶಾಜ್ಯೋತಿ ರೈ ಸಂರ್ಧೋಬೋಚಿತವಾಗಿ ಮಾತನಾಡಿ ಸಂಸ್ಥೆಗೆ ಶುಭ ಕೋರಿದರು. ಶ್ವೇತದೀಪ ದಾಸ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸನಾತನ ದಾಸ ವಂದಿಸಿದರು.