ಜೈ ತುಲುನಾಡ್ ಸಂಘಟನೆಯು ತುಳು ಭಾಷೆ, ತುಳು ಲಿಪಿಯ ಬೆಳೆವಣಿಗೆಗಾಗಿ, ಹಾಗೂ ಆಚಾರ ವಿಚಾರಗಳ ಉಳಿವಿಗಾಗಿ ಇದೆ.
ಉಡುಪಿ, ಮಂಗಳೂರು,ಕಾಸರಗೋಡು ,ಬೆಂಗಳೂರಿನಲ್ಲಿ ಜೈ ತುಲುನಾಡ್ ಸಂಘದ ಘಟಕಗಳು ಇವೆ.
5 ಜನವರಿ 2024 ರಂದು ಕಾರ್ಕಳ ಘಟಕ ಉದ್ಘಾಟನೆಗೊಳ್ಳಲಿದೆ.
ಬೆಳಿಗ್ಗೆ 9 ಗಂಟೆಗೆ ಬಜಗೋಳಿಯಲ್ಲಿ ಬೈಕ್ ರ್ಯಾಲಿಯನ್ನು ಸುನಿಲ್ ಕುಮಾರ್ ಚಾಲನೆ ಮಾಡಿ, ಬಂಡಿಮಠ ಕಾರ್ಕಳದಲ್ಲಿ ಉದಯ್ ಕುಮಾರ್ ಶೆಟ್ಟಿ ಇವರು ಚಾಲನೆ ನೀಡಲಿದ್ದಾರೆ.
ಅದಾದ ನಂತರ “ಜೈ ತುಲುನಾಡ್(ರಿ. )ಕಾರ್ಕಳ” ಘಟಕದ ಉದ್ಘಾಟನಾ ಸಮಾರಂಭ ಮಯೂರ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ನಡೆಯಲಿದೆ.