ದಾವಣಗೆರೆ : ದಾವಣಗೆರೆಯ ಕಲಾಕುಂಚದ ಹಾವೇರಿ ಜಿಲ್ಲಾ ಶಾಖೆ ಏಪ್ರಿಲ್ 28 ರಂದು ಭಾನುವಾರ ಅಪರಾಹ್ನ 3 ಗಂಟೆಗೆ ಹಾವೇರಿ ಜಿಲ್ಲಾ ರಾಣೇಬೆನ್ನೂರಿನ ಹುಣಸಿಕಟ್ಟೆ ರಸ್ತೆಯಲ್ಲಿರುವ ಖನ್ನೂರ
ವಿದ್ಯಾನಿಕೇತನ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಉದ್ಘಾಟನೆಯಾಗಲಿದೆ ಎಂದು ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ. ಖನ್ನೂರು ವಿದ್ಯಾಸಂಸ್ಥೆಯ ಅಧ್ಯಕ್ಷರದ ಡಾ. ಪ್ರವೀಣ್ ಎಂ.ಖನ್ನೂರು ಸಮಾರಂಭವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ
ಸಾಲಿಗ್ರಾಮ ಗಣೇಶ್ ಶೆಣೈ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖನ್ನೂರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ನಾಗೇಶ್ ಎಂ., ಪ್ರಾಚಾರ್ಯರಾದ ಕೆ.ಸುಬ್ಬರಾವ್, ಅಧ್ಯಕ್ಷರಾದ ಕಲಾಕುಂಚ ವಿವಿಧ
ಬಡಾವಣೆಗಳ ಶಾಖೆಗಳ ಅಧ್ಯಕ್ಷರುಗಳಾದ ಶಾರದಮ್ಮ ಶಿವನಪ್ಪ, ಪ್ರಭಾ ರವೀಂದ್ರ, ಲಲಿತ ಕಲ್ಲೇಶ್, ರಾಜಶೇಖರ ಬೆನ್ನೂರು, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ, ಯುವ ಗಾಯಕಿ ಕವಯತ್ರಿ ಕವಿತಾ ತಿಮ್ಮೇಶ್ ಆಗಮಿಸಲಿದ್ದಾರೆ. ನೂತನವಾಗಿ ಆಯ್ಕೆಯಾದ ಕಲಾಕುಂಚದ ಹಾವೇರಿ ಜಿಲ್ಲಾಧ್ಯಕ್ಷರಾದ ಪರಮೇಶ್ವರಯ್ಯ ವೀರಭದ್ರಯ್ಯ ಮಠದ್ ವೇದಿಕೆಯಲ್ಲಿ ಗೌರವ ಉಪಸ್ಥಿತರಿರುತ್ತಾರೆ ಎಂದು
ಕಲಾಕುಂಚ ಪ್ರಧಾನ ಕಾರ್ಯದರ್ಶಿ ಶೈಲಾ ವಿಜಯಕುಮಾರ್ ತಿಳಿಸಿದ್ದಾರೆ. 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲಿ ಕನ್ನಡದಲ್ಲಿ ಪರಿಪೂರ್ಣ ಅಂಕ ಪಟೆದ ವಿದ್ಯಾರ್ಥಿಗಳಿಗೆ “ಸರಸ್ವತಿ ಪುರಸ್ಕಾರ” ರಾಜ್ಯಪ್ರಶಸ್ತಿ ವಿತರಿಸಿ ಗೌರವಿಸಲಾಗುತ್ತದೆ. ಸರ್ವ ಕನ್ನಡ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಸರ್ವ ಸದಸ್ಯರು, ಪದಾಧಿಕಾರಿಗಳ ಪರವಾಗಿ ಕಲಾಕುಂಚ ಸಹ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.