ದ.ಕ.ಜಿಲ್ಲಾ.ಚಪ್ಟೇಗಾರ ಸಮಾಜ ಸುಧಾರಕ ಸಂಘ (ರಿ) ಮಂಗಳೂರು ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ, ವಿಶ್ವಕೊಂಕಣಿ ಕೇಂದ್ರ ಶಕ್ತಿನಗರ, ಮಂಗಳೂರು ಇಲ್ಲಿ ದಿ. ೨೯-೧೨-೨೦೨೪ ರಂದು “ವಿದ್ಯಾರ್ಥಿ ವೇತನ” ವನ್ನು ನೀಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸುಮಾರು ೬೦ ವಿದ್ಯಾರ್ಥಿಗಳಿಗೆ ರೂ. ೫ .೦೦ ಲಕ್ಷದಷ್ಟು ವಿದ್ಯಾರ್ಥಿ ವೇತನವನ್ನು ‘ವಿದ್ಯಾಕಲ್ಪಕ’ ವಿದ್ಯಾರ್ಥಿ ವೇತನ ಯೋಜನೆಯಡಿ ವಿತರಿಸಲಾಯಿತು.
ಶ್ರೀಮತಿ ದೀಪ ಗೌತಮ್ ರಾವ್ ಇವರ ಪ್ರಾರ್ಥನೆಯೊಂದಿಗೆ ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಗೊಂಡು, ಕುಮಾರಿ ಆದ್ಯ. ಎಸ್ ನಾಯಕ್ ರವರ ಸ್ವಾಗತ ನೃತ್ಯ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ನಂದಗೋಪಾಲ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾಟ್ಯ ಗುರು ಶ್ರೀ ಉಳ್ಳಾಲ್ ಮೋಹನ್ ಕುಮಾರ್, ಡಾಕ್ಟರ್ ಪ್ರಿಯ ಬಿ ನಾಯಕ್, ಶ್ರೀಮತಿ ವಿಮಲಾ ಬಾಯಿ, ಚಪ್ಟೇಗಾರ ಸಮಾಜ ಸುಧಾರಕ ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರೀತಮ್ ಕುಮಾರ್ ನಾಯಕ್, ಪ್ರಧಾನ ಕಾರ್ಯದರ್ಶಿ ಶ್ರೀ ಎಮ್ ಮುರಳಿ ಮನೋಹರ ನಾಯಕ್ ವೇದಿಕೆಯಲ್ಲಿ ಉಪಸ್ಥಿರಿದ್ದರು. ಈ ಸಂದರ್ಭದಲ್ಲಿ ನಾಟ್ಯಗುರು ಉಳ್ಳಾಲ ಮೋಹನ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಆನಂತರ ವಿದ್ಯಾರ್ಥಿಗಳಿಗೆ ಪ್ರೇರಣಾ ಕೌಶಲ್ಯ ಸಂಭಂಧಿತ ತರಬೇತು ಕಾರ್ಯಾಗಾರವನ್ನು ಕುಡ್ಪಿ ವಿದ್ಯಾ ಶೆಣೈ ಹಾಗೂ ಖ್ಯಾತ ರಂಗಭೂಮಿ ಕಲಾವಿದ, ನಿರ್ದೇಶಕ ಶ್ರೀ ಜಗನ್ ಪವಾರ್ ಇವರು ನಡೆಸಿಕೊಟ್ಟರು. ಮತ್ತು ಪೋಷಕರಿಗೆ ಮಾರ್ಗದರ್ಶನ ಹಾಗೂ ಮಾಹಿತಿ ಕಾರ್ಯಾಗಾರವು ಸುಮತಿ ಗಜಾನನ ಪೈ ತೋನ್ಸೆ ಇವರಿಂದ ನಡೆಯಿತು.
ವಿಶ್ವಕೊಂಕಣಿ ಕೇಂದ್ರದ ಉಪಾಧ್ಯಕ್ಷರುಗಳಾದ ಶ್ರೀ ರಮೇಶ್ ಡಿ ನಾಯಕ್, ಶ್ರೀ ವಿಲಿಯಂ ಡಿಸೋಜಾ, ಸಿಎಒ ಶ್ರೀ ಬಿ ದೇವದಾಸ ಪೈ,ಚಪ್ಟೇಗಾರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಸದಾನಂದ ನಾಯಕ್ ಹಾಗೂ ಡಾ. ವಿನಾಯಕ್ ನಾಯಕ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಪ್ರೀತಮ್ ಕುಮಾರ್ ನಾಯಕ್ ವಂದಿಸಿದರು. ಹಾಗೂ ಪ್ರೀತಮ್ ನಾಯಕ್ ಜಲ್ಲಿಗುಡ್ಡ ಕಾರ್ಯಕ್ರಮವನ್ನು ನಿರೂಪಿಸಿದರು.