Saturday, April 26, 2025
Homeಉಡುಪಿರಜತಾದ್ರಿಯಲ್ಲಿ ಸಂಸದರ ಕಚೇರಿ ಉದ್ಘಾಟನೆ

ರಜತಾದ್ರಿಯಲ್ಲಿ ಸಂಸದರ ಕಚೇರಿ ಉದ್ಘಾಟನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಅಧಿಕೃತ ಕಚೇರಿಯನ್ನು ಮಣಿಪಾಲದ ‘ರಜತ್ರಾದ್ರಿ’ಯ ‘ಸಿ’ ಬ್ಲಾಕ್ ನಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಲೆಕ್ಕ ಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಸಂಸದ ಕೋಟ, ಜನಪರ ಕೆಲಸ ಕಾರ್ಯಗಳನ್ನು ಮಾಡಲು, ಸಾರ್ವಜನಿಕರ ಬೇಡಿಕೆ, ಕುಂದು ಕೊರತೆಗಳನ್ನು ಆಲಿಸಲು ಲೋಕಸಭಾ ಕ್ಷೇತ್ರದ ಸಂಸದರ ಅಧಿಕೃತ ಕಛೇರಿಯನ್ನು ಪ್ರಾರಂಭಿಸಲಾಗಿದೆ. ಸಂಘಟನೆಯ ಹಿರಿಯರಾದ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ದೀಪ ಬೆಳಗಿಸಿ ಸಂಸದರ ಕಛೇರಿಗೆ ಚಾಲನೆ ನೀಡಿ ಇದು ಜನರ, ದುರ್ಬಲರ, ಸಾರ್ವಜನಿಕರ, ಜನ ಸಾಮಾನ್ಯರ ಕೆಲಸ ಮಾಡಲಿ ಎಂದು ಶುಭ ಹಾರೈಸಿದ್ದಾರೆ. ನಾನು ಮತ್ತು ಸಿಬ್ಬಂದಿಗಳು ಒಟ್ಟಾಗಿ ಜನ ಸಾಮಾನ್ಯರ ಸೇವೆ ಮಾಡಲು ದುಡಿಯುವ ಮೂಲಕ ಜನರ ಸಮಸ್ಯೆಗಳನ್ನು ಪರಿಹಾರ ಮಾಡಲು ಬದ್ಧತೆಯಿಂದ ಪ್ರಯತ್ನಿಸುತ್ತೇವೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಸದರ ಕಛೇರಿ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಉಡುಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀಶ ನಾಯಕ್ ಪೆರಣoಕಿಲ, ಸದಾನಂದ ಉಪ್ಪಿನಕುದ್ರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿರಣ್ ಕುಮಾರ್ ಬೈಲೂರು, ಜಯರಾಮ ಸಾಲ್ಯಾನ್, ಸುರೇಶ್ ಶೆಟ್ಟಿ ಕಡೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಐರೋಡಿ ವಿಟ್ಠಲ ಪೂಜಾರಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಪ್ರಮುಖರಾದ ಕುತ್ಯಾರು ನವೀನ್ ಶೆಟ್ಟಿ, ರಾಜೇಶ್ ಕಾವೇರಿ, ಶ್ಯಾಮಲಾ ಎಸ್. ಕುಂದರ್, ಬಿ.ಎನ್. ಶಂಕರ ಪೂಜಾರಿ, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆೆ, ಗೀತಾoಜಲಿ ಸುವರ್ಣ, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಜಗದೀಶ್ ಆಚಾರ್ಯ ಕಪ್ಪೆೆಟ್ಟು, ದೀಪಕ್ ಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸದಾನಂದ ಬಳ್ಕೂರು, ರಾಘವೇಂದ್ರ ಕುಂದರ್, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಅನಿತಾ ಶ್ರೀಧರ್, ಶ್ರೀಕಾಂತ್ ನಾಯಕ್, ವೀಣಾ ಎಸ್. ಶೆಟ್ಟಿ, ರಶ್ಮಿತಾ ಬಿ. ಶೆಟ್ಟಿ, ಸಚಿನ್ ಪೂಜಾರಿ, ಜಿತೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ ಗೋಪಾಡಿ, ಶರಣ್ ಮಟ್ಟು, ಗಿರೀಶ್ ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ರಾಜೀವ್ ಕುಲಾಲ್, ವಿಜಯ ಕೊಡವೂರು, ಕನ್ನಾರು ಕಮಲಾಕ್ಷ ಹೆಬ್ಬಾರ್, ಚಂದ್ರ ಪಂಚವಟಿ, ಶ್ರೀಕಾಂತ್ ಕಾಮತ್, ಗೋಪಾಲಕೃಷ್ಣರಾವ್ ಮಟ್ಟು, ರವಿ ಅಮೀನ್, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶಂಕರ ಅಂಕದಕಟ್ಟೆೆ, ರಾಘವೇಂದ್ರ ಉಪ್ಪೂರು, ನವೀನ್ ನಾಯ್ಕ್, ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ಸಚಿನ್ ಪಿತ್ರೋಡಿ, ನಳಿನಿ ಪ್ರದೀಪ್ ರಾವ್, ಚಿನ್ಮಯಮೂರ್ತಿ, ಸೌರಭಿ ಪೈ, ರಮ್ಯಾ ರಾವ್ ಸಹಿತ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ನಗರಸಭಾ ಸದಸ್ಯರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಮಧುಸೂದನ ಬಾಯಿರಿ ಕೋಟ ಇವರ ಪೌರೋಹಿತ್ಯದಲ್ಲಿ ಪೂಜಾ ವಿಧಿ ವಿಧಾನ ನಡೆಯಿತು. ಸಂಸದ ಕೋಟ ಅವರ ಪತ್ನಿ ಶಾಂತ, ಪುತ್ರ ಶಶಿಧರ್, ಪುತ್ರಿಯರಾದ ಸ್ವಾತಿ ಮತ್ತು ಶೃತಿ ಹಾಗೂ ಸಂಸದರ ಆಪ್ತ ಸಹಾಯಕರು ಮತ್ತು ಸಿಬ್ಬಂಧಿ ವರ್ಗ ಪೂಜಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

RELATED ARTICLES
- Advertisment -
Google search engine

Most Popular