ಮುಲ್ಕಿ: ಕಿನ್ನಿಗೋಳಿ-ಮುಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ರೈಲ್ವೆ ನಿಲ್ದಾಣ ಕ್ರಾಸ್ ಬಳಿ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾದ ಬಸ್ ತಂಗುದಾಣ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು ಬಸ್ ತಂಗುದಾಣ ಅರ್ಧಂಬರ್ಧ ಕುಸಿತ ಹಾಗೂ ತಂಗುದಾಣ ಸುತ್ತಮುತ್ತ ಹುಲ್ಲಿನ ಪೊದೆಗಳು ಆವರಿಸಿ ಅಪಾಯಕಾರಿಯಾಗಿ ಪರಿಣಮಿಸಿದೆ.
ಮುಲ್ಕಿ ರೈಲ್ವೇ ನಿಲ್ದಾಣದಿಂದ ಪ್ರಯಾಣಿಕರು ನಡೆದುಕೊಂಡು ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಜಂಕ್ಷನ್ ನವರೆಗೆ ಬಂದು ಹೆದ್ದಾರಿ ಬದಿಯಲ್ಲಿರುವ ತಂಗುದಾಣದ ಅವ್ಯವಸ್ಥೆಯಿಂದ ಸುಸ್ತಾಗಿ ಬಸ್ಸಿಗಾಗಿ ಹೆದ್ದಾರಿ ಬದಿಯಲ್ಲಿ ಕಾಯುತ್ತಿರುವ ಪರಿಸ್ಥಿತಿ ಎದುರಾಗಿದೆ.
ಕೂಡಲೇ ಲಯನ್ಸ್ ಕ್ಲಬ್ ಸೇವಾ ಸಂಸ್ಥೆ ಎಚ್ಚೆತ್ತು ಬಸ್ ತಂಗುದಾಣವನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಪಡಿಸಬೇಕು ಎಂಬ ತುಳುನಾಡು ವಾರ್ತೆ ವರದಿಗೆ ಎಚ್ಚೆತ್ತ ಮುಲ್ಕಿ ಲಯನ್ಸ್ ಕ್ಲಬ್ ವತಿಯಿಂದ ಸುಮಾರು 1.5 ಲಕ್ಷ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣ ಮಾರ್ಗ ಸೂಚಿ ಫಲಕ ನಿರ್ಮಾಣಗೊಂಡಿದ್ದು ಜಿಲ್ಲಾ ರಾಜ್ಯಪಾಲರಾದ ಭಾರತಿ ಬಿ ಉದ್ಘಾಟಿಸಿದರು.
ಈ ಸಂದರ್ಭ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರೋಲ್ಫಿ ಡಿಕೋಸ್ಟ, ಮಾತನಾಡಿ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ತುಳುನಾಡು ವಾರ್ತೆ ನಲ್ಲಿ ವರದಿಯಾಗಿದ್ದು ಸುಮಾರು ಒಂದ1.5 ಲಕ್ಷ ವೆಚ್ಚದಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆಗೊಂಡಿದೆ, ಸ್ವಚ್ಛತೆ ಕಾಪಾಡಿ ಎಂದು ಮನವಿ ಮಾಡಿದರು.
ಈ ಸಂದರ್ಭ ಮುಲ್ಕಿ ಲಯನ್ಸ್ ಪದಾಧಿಕಾರಿಗಳಾದ ಸುಜಿತ್ ಸಾಲ್ಯಾನ್,ಮಾಜೀ ಅಧ್ಯಕ್ಷೆ ಶೀತಲ್ ಸುಶೀಲ್, ಸುಶೀಲ್ ಬಂಗೇರ,ಉದಯ ಅಮೀನ್ ಮಟ್ಟು,ದೇವ ಪ್ರಸಾದ್ ಪುನರೂರು,ಶೋಭಾ ಸುಜಿತ್, ವೆಂಕಟೇಶ್ ಬಿ, ಹರ್ಷರಾಜ ಶೆಟ್ಟಿ, ಪ್ರಬೋದ್ ಕುಡ್ವ , ಗುತ್ತಿಗೆದಾರ ವರುಣ್ ಚಿತ್ರಾಪು ಮತ್ತಿತರರು ಉಪಸ್ಥಿತರಿದ್ದರು