ಮಡಂತ್ಯಾರು: ರೋಟರಿ ಕ್ಲಬ್ ಮಡಂತ್ಯಾರು ಇದರ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 10ರಂದು ಮಡಂತ್ಯಾರಿನ ಎಸ್. ಡಿ. ಎಸ್ ಸಭಾಭವನದಲ್ಲಿ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷ ನಿತ್ಯಾನಂದ ಬಿ ಪತ್ರಿಕಾ ಪ್ರಕಟಣೆ ಯಲ್ಲಿ ಹೇಳಿದರು.
ಮಡಂತ್ಯಾರು ರೋಟರಿ ಕ್ಲಬ್ ಕಳೆದ 5 ವರ್ಷಗಳಲ್ಲಿ ಸಮುದಾಯದ ಸರ್ವತೋಮುಖ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿ ಉತ್ತಮ ಕೆಲಸ ಕಾರ್ಯಗಳಿಂದ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆದಿದೆ. ಮಡಂತ್ಯಾರು ಪರಿಸರದ ಎಲ್ಲಾ ರಂಗಗಳ ಸಾಧಕರನ್ನು ಸದಸ್ಯರನ್ನಾಗಿ ಒಳಗೊಂಡಿರುವ ಮಡಂತ್ಯಾರ್ ಕ್ಲಬ್ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳನ್ನು ಈ ಹಿಂದಿನಿಂದಲೂ ಆಯೋಜಿಸಿ ಕೊಂಡು ಬಂದಿದೆ.
ಈ ಸಾಲಿನಲ್ಲಿ ಪ್ರಮುಖವಾಗಿ ಕಳೆದ ಸಾಲಿನ ಸೇವಾ ಚಟುವಟಿಕೆ ಗಳ ಜೊತೆಗೆ ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರಾಥಮಿಕ ಪ್ರೌಢಶಾಲಾ ಮಕ್ಕಳ ಮಾನಸಿಕ ಅರೋಗ್ಯ ಶಿಬಿರ, ಮಳೆ ಕೊಯ್ಲ, ಮತ್ತು ಜಲಜಾಗೃತಿ ಇಂತಹ ಕಾರ್ಯಕ್ರಮ ಗಳಿಗೆ ಒತ್ತು ನೀಡಲಾಗುವುದು ಎಂದು ಪ್ರಕಟಣೆ ಯಲ್ಲಿ ತಿಳಿಸಿದರು.
ಕಳೆದ ಸಾಲಿನಲ್ಲಿ ಮಾಡಿದ ಸೇವಚಟುವಟಿಕೆಗಳನ್ನು ಗುರುತಿಸಿ ಕ್ಲಬ್ ಗೆ ಪ್ಲಾಟಿನಂ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗಿದೆ ಎಂದು ಕಳೆದ ಸಾಲಿನ ಅಧ್ಯಕ್ಷರಾದ ಶ್ರೀ ಪೇಜಾವರ ಶ್ರೀಧರ ರಾವ್ ತಿಳಿಸಿದರು.
ಈ ಸಾಲಿನ ಕ್ಲಬ್ ನ ಕಾರ್ಯದರ್ಶಿ ಯವರಾದ ತುಳಸಿದಾಸ್ ಪೈ ಹಾಗೂ ಕ್ಲಬ್ ನ ಡೈರೆಕ್ಟ್ ಗಳಾದ ಜಯಂತ ಶೆಟ್ಟಿ ಬಿ, ಹರ್ಷ ನಾರಾಯಣ ಶೆಟ್ಟಿ, ಕಾಂತಪ್ಪ ಗೌಡ ಹಾಜರಿದ್ದರು.