Monday, December 2, 2024
Homeಮಂಗಳೂರುಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಂಸ್ಥೆಗೆ ನೂತನ ಸದಸ್ಯರನ್ನು...

ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡಿಸಿ, ಬಲಪಡಿಸಿ ಯಶಸ್ಸು ಸಾಧಿಸಿ : ಡಾ| ಶಾಂತರಾಮ ಶೆಟ್ಟಿ

ಮಂಗಳೂರು ನ. 08 : ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯು 94 ವರ್ಷಗಳ ಇತಿಹಾಸ ಹೊಂದಿದ್ದು ಸರ್ವ ವೈದ್ಯಕೀಯ ತಜ್ಞರ ಮಾತ್ರ ಸಂಸ್ಥೆಯಾಗಿದ್ದು ಸದಸ್ಯರ ವೃತ್ತಿಪರ ಸೇವೆಯ ರಕ್ಷಣೆ ಮತ್ತು
ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡಿಸಿ ವಿವಿಧ ಜನಪರ ಸೇವಾ ಮತ್ತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರವನ್ನು ಹಮ್ಮಿಕೊಂಡ ಯಶಸ್ಸು ಸಾಧಿಸಬೇಕೆಂದು ನಿಟ್ಟೆ ವಿಶ್ವವಿದ್ಯಾಲಯದ ಪ್ರೋ ಚಾನ್ಸಲರ್ ಡಾ| ಶಾಂತರಾಮ ಶೆಟ್ಟಿ ಸಲಹೆ ನೀಡಿದ್ದಾರೆ. ಅವರು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ 2024-25 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ
ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಪದಾಧೀಕರಣದ ವಿವಿಧ ವಿಧಿವಿಧಾನವನ್ನು ನೆರವೇರಿಸಿ ವೈದ್ಯರು ಕರ್ತವ್ಯ ನಿಷ್ಠೆ ಮತ್ತು ಸಮಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿ, ಆರೋಗ್ಯ ಮತ್ತು ಶೈಕ್ಷಣಿಕ ಕಾರ್ಯಗಾರದ ಕ್ಷೇತ್ರಕ್ಕೆ ಪ್ರಾಧ್ಯನತೆ ನೀಡಿ, ನೂತನ ತಂಡಕ್ಕೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಕ್ರೈಸ್ತ ಧರ್ಮಪ್ರಾಂತ್ಯೀಯ ಧರ್ಮಾಧ್ಯಕ್ಷರಾದ ವಂ| ಪೀಟರ್ ಪೌಲ್ ಸಲ್ದಾನ, ನಗರದ ಬ್ರಹ್ಮಕುಮಾರಿ ಕೇಂದ್ರ ಸಂಸ್ಥೆಯ ಮುಖ್ಯಸ್ಥರಾದ ಕು| ವಿಶ್ವೇಶ್ವರಿ, ನಗರದ ನೂರ್ ಅರಬಿಕ್ ಶಾಲೆಯ ವಿಭಾಗೀಯ ಮುಖ್ಯಸ್ಥರಾದ ಮಹಮ್ಮದ್ ಫರಾಹನ್ ನೆಡ್ವಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ಆರೋಗ್ಯ ಮತ್ತು ಶೈಕ್ಷಣಿಕ ಸಮಾಜ ಸೇವಾ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತ ಪಡಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.

ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಡಾ| ಜೆಸ್ಸಿ ಮಾರಿಯ, ಗೋವಿಯಸ್ ಡಿ’ಸೋಜರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಹುದ್ದೆಯು ಸವಾಲುಗಳನ್ನು ಹೊಂದಿದ್ದು ಜವಾಬ್ದಾರಿಯುತವಾಗಿದೆ ಎಂದು ನುಡಿದು ತಮ್ಮ ಅಧಿಕಾರವಾಧಿಯಲ್ಲಿ ಹಲವಾರು ಸಮಾಜ ಸೇವಾ ಆರೋಗ್ಯ ಮತ್ತು ಶೈಕ್ಷಣಿಕ ಕಾರ್ಯಗಾರವನ್ನು ಹಮ್ಮಿಕೊಂಡಲಾಗಿದ್ದು ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವಸದಸ್ಯರ
ಪ್ರೋತ್ಸಾಹ ಮತ್ತು ಒಗ್ಗಟ್ಟಿನ ಬೆಂಬಲ ಕೋರಿದರು. ನಿರ್ಗಮನ ಅಧ್ಯಕ್ಷ ಡಾ| ರಂಜನ್ ಸ್ವಾಗತಿಸಿ, ಸರ್ವಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಡಾ| ಅವಿನ್ ಆಳ್ವ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ನಿರ್ಗಮನ ಕೋಶಾಧಿಕಾರಿ ಡಾ| ಪ್ರಶಾಂತ್ ನಿರ್ಗಮನ ಮಹಿಳಾ ವೈದ್ಯಯರ
ಸಂಘದ ಅಧ್ಯಕ್ಷೆ ಡಾ| ಪ್ರಭಾ ಅಧಿಕಾರಿ ನೂತನ ಅಧ್ಯಕ್ಷೆ ಡಾ| ಮೀರಾ ರಾವ್, ನೂತನ ಕೋಶಾಧಿಕಾರಿ ಡಾ| ಮಧುಸೂಧನ್ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಡಾ| ಅರ್ಚನಾ ಭಟ್ ವಂದಿಸಿದರು. ದೀಪಕ್ ಗಂಗೊಳ್ಳಿ, ಡಾ| ತಾನಿಯ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ನಗರದ ಖ್ಯಾತ ವೈದ್ಯಕೀಯ ಸಂಸ್ಥೆ ಅಜಿಲಾಸ್ ಡಯಾಗ್ನಸ್ಟಿಕ್ಸ್ ಸಂಸ್ಥೆ ಕಾರ್ಯಕ್ರಮವನ್ನು ಪ್ರಾಯೋಜಿಸಿತ್ತು.

RELATED ARTICLES
- Advertisment -
Google search engine

Most Popular