Sunday, March 23, 2025
HomeUncategorizedಬಿಟಿಎಂ ಬಡಾವಣೆಯಲ್ಲಿ ದ್ವಿಚಕ್ರ ವಾಹನಗಳ “ಪ್ರಿಮಿಯಾ” ಶೋ ರೂಂ ಉದ್ಘಾಟನೆ

ಬಿಟಿಎಂ ಬಡಾವಣೆಯಲ್ಲಿ ದ್ವಿಚಕ್ರ ವಾಹನಗಳ “ಪ್ರಿಮಿಯಾ” ಶೋ ರೂಂ ಉದ್ಘಾಟನೆ

ಬೆಂಗಳೂರು: ನಗರದ ಬಿಟಿಎಂ ಬಡಾವಣೆಯಲ್ಲಿ ದ್ವಿಚಕ್ರ ವಾಹನಗಳ ಹಿರೋ ಕಂಪೆನಿಯ “ಪ್ರಿಮಿಯಾ” ಶೋರೂಂ ಶುಭಾರಂಭ ಮಾಡಿದೆ.
ಹಿರೋ ಕಂಪೆನಿಯ ದಕ್ಷಿಣ ಭಾರತದ ವಲಯ ಮುಖ್ಯಸ್ಥ ರಾಮರಾವ್ ಶೋ ರೂಂ ಉದ್ಘಾಟಿಸಿದರು. ಗ್ರಾಹಕರ ಅನುಭವ ವಿಭಾಗದ ದಕ್ಷಿಣ ಭಾರತದ ವಲಯ ಮುಖ್ಯಸ್ಥ ಟಿ.ಬಿ. ಶಾಜಿ, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ ಮತ್ತಿತರರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ರಾಮರಾವ್, ಈ ಹೊಸ ಶೋರೂಂ ಅತ್ಯುತ್ತಮ ಸೇವೆಗಳನ್ನು ಒದಗಿಸಲಿದ್ದು, ಅತ್ಯಾಧುನಿಕ ದ್ವಿಚಕ್ರ ವಾಹನಗಳನ್ನು ಪರಿಚಯಿಸಲಿದೆ. ವಿಶೇಷವಾಗಿ ಬೆಂಗಳೂರು ನಗರಕ್ಕೆ ಅಗತ್ಯವಾಗಿರುವ ಮಾದರಿಯ ವಾಹನಗಳು ಇಲ್ಲಿ ಲಭ್ಯವಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular