Tuesday, April 22, 2025
Homeಬೆಳ್ತಂಗಡಿಸರಕಾರಿ ಪ್ರೌಢಶಾಲೆ ಪದ್ಮುಂಜ ಸಭಾಭವನದಲ್ಲಿ ರಂಗಸಿರಿ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನೆ

ಸರಕಾರಿ ಪ್ರೌಢಶಾಲೆ ಪದ್ಮುಂಜ ಸಭಾಭವನದಲ್ಲಿ ರಂಗಸಿರಿ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನೆ

ಪದ್ಮುಂಜ : ಸರಕಾರಿ ಪ್ರೌಢಶಾಲೆ ಪದ್ಮುಂಜ ಇದರ ಸಭಾಭವನದಲ್ಲಿ ರಂಗಸಿರಿ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ನಾರಾಯಣಗೌಡ ಮುಚ್ಚುರು ಉದ್ಘಾಟಿಸಿ,ಮಕ್ಕಳಿಗೆ ಶುಭವನ್ನು ಹಾರೈಸಿದರು.

ಅಧ್ಯಕ್ಷತೆಯನ್ನು ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೀತಾರಾಮ ಮಡಿವಾಳ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಘವ ಗೇರುಕಟ್ಟೆ, ಯಕ್ಷಗಾನ ಅಕಾಡೆಮಿ ಸದಸ್ಯರು ಹಾಗೂ ಭರತನಾಟ್ಯ ನೃತ್ಯ ಗುರುಗಳಾದ ವಿದುಷಿ ಡಿಂಪಲ್ ಇವರು ಉಪಸ್ಥಿತರಿದ್ದರು. ಹಾಗೆಯೇ ಕಿರಣ್ ಪುಷ್ಪಗಿರಿ ಇವರು ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳಿಗೆ ಶುಭ ಹಾರೈಸಿ ಸಿಹಿ ತಿಂಡಿಗಳನ್ನು ಹಂಚಿದರು. ಸಂಧ್ಯಾ ಆನಂದ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ಯಕ್ಷ ಗುರು ಇವರು ವಂದಿಸಿದರು.

RELATED ARTICLES
- Advertisment -
Google search engine

Most Popular