ದಿನಾಂಕ 1/12/2024 ರಂದು ಚಿಲಿಂಬಿ ಸತೀಶ ಮೂಲ್ಯರ ಮನೆಯಲ್ಲಿ ಕಾಂತಾವರ ಗ್ರಾಮದ ಬಾರಾಡಿಯಲ್ಲಿ ಕುಂಭ ನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳ್ಮಣ್ ಇದರ ಸ್ವಸಹಾಯ ಸಂಘಗಳಲ್ಲಿ ಒಂದಾದ ಶ್ರೀಮಾತಾ ಸ್ವಸಹಾಯ ಸಂಘವನ್ನು ಕ್ರೆಡಿಟ್ ಕುಂಭ ನಿಧಿ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಬೆಳ್ಮಣ್ ಇದರ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಇವರಿಂದ ಉದ್ಘಾಟಿಸಲಾಯಿತು.
ಈ ಸಭೆಯಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಜಗನ್ನಾಥ ಮೂಲ್ಯ, ನಿರ್ದೇಶಕರಾದ ಬೊಗ್ಗುಮೂಲ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಜೇಶ್ ಸೇವಾ ನಿರತರಾದ ಆಶಾ ವರದರಾಜ ಹಾಗೂ ಕಾಂತಾವರ ಕುಲಾಲ ಸಂಘದ ಅಧ್ಯಕ್ಷರಾದ ವಿಠಲ ಮೂಲ್ಯ ಉಪಸ್ಥಿತರಿದ್ದರು. ಶ್ರೀ ಮಾತಾ ಸ್ವಸಹಾಯ ಸಂಘದ ಅಧ್ಯಕ್ಷರಾದ ಜ್ಯೋತಿ ಕುಲಾಲ್ ಇವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಪ್ರಾರ್ಥನೆ ಹಾಗೂ ವಂದನೆಗಳನ್ನು ಸಲ್ಲಿಸಿದರು.