‘ವಿದ್ಯಾರ್ಥಿಗಳು ತಮ್ಮಕಾಲೇಜುಜೀವನದಲ್ಲಿ ಹೇಗಿರುತ್ತಾರೆಎಂಬುದುಅವರ ಮುಂದಿನ ಭವಿಷ್ಯರೂಪಿಸಲು ಸಹಕಾರಿಯಾದುದಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಮುಖ್ಯವಾದುದಾಗಿದೆ.ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಡ್ರಗ್ಸ್,ಮೊಬೈಲ್,ಬೈಕ್ ಈ ೩ ಮುಖ್ಯ ವಿಷಯಗಳ ಬಗ್ಗೆ ಅತ್ಯಂತಜಾಗ್ರತೆ ವಹಿಸಬೇಕು’ಎಂದು ಸಹಾಯಕ ಪೊಲಿಸ್ ಆಯುಕ್ತರಾದ ಶ್ರೀಕಾಂತ್ ತಿಳಿಸಿದರು. ಅವರು ಮೂಡುಬಿದಿರೆ ಶ್ರೀ ಮಹಾವೀರಕಾಲೇಜಿನ ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಾ, ‘ಡ್ರಗ್ಸ್ ಮಹಾಮಾರಿಗೆಯಾರೂ ಬಲಿಯಾಗಬೇಡಿ. ವಿದ್ಯೆಯಕಡೆಗೆಏಕಾಗ್ರತೆ ಬೆಳೆಸಿಕೊಳ್ಳಿ. ಮೊಬೈಲ್‌ನ್ನು ವಿದ್ಯೆಗೆ ಪೂರಕವಾಗಿ ಮಾತ್ರ ಬಳಸಿ.ಬೈಕ್‌ನಲ್ಲಿ ಚಲಾಯಿಸುವಾಗ ಹೆಲ್ಮೆಟ್‌ಕಡ್ಡಾಯವಾಗಿ ಧರಿಸಿ’ಎಂಬುದಾಗಿ ವಿದ್ಯಾರ್ಥಿಗಳಿಗೆ ಕಿವಿ ಮಾತು ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಆಳ್ವ ‘ವಿದ್ಯಾರ್ಥಿಗಳು ಉದ್ಯೋಗಕ್ಕೆ ಬೇಕಾದ ಪೂರಕ ತಯಾರಿಗಳನ್ನು ಮೊದಲೇ ಮಾಡಿಕೊಳ್ಳಬೇಕು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆರಂಭದಿಂದಲೇಅಭ್ಯಾಸ ಮಾಡಿದರೆಯಶಸ್ಸುಖಂಡಿತಾ ಲಭ್ಯವಾಗುವುದು’ಎಂದರು.‘ಹಲವು ಸಾಧಕ ವಿದ್ಯಾರ್ಥಿಗಳ ಉದಾಹರಣೆ ನೀಡುತ್ತಾ ವಿದ್ಯಾರ್ಥಿಗಳಿಗೆ ಸ್ಪೂರ್ತಿತುಂಬಿದರು.ಆಳ್ವಾಸ್ ಸಂಸ್ಥಾಪಕರಾದ ಮೋಹನ್ ಆಳ್ವ ಮಹಾವೀರಕಾಲೇಜಿನ ಹಳೆ ವಿದ್ಯಾರ್ಥಿಎಂಬುದನ್ನು ನೆನಪಿಸಿಕೊಂಡರು.ಆಳ್ವಾಸ್ ಸ್ಥಾಪನೆಗೆ ಮಹಾವೀರಕಾಲೇಜು ಬುನಾದಿ ಎಂದರು.ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದಿಂದಉತ್ತಮ ಚಟುವಟಿಕೆಗಳು ಮೂಡಿಬರಲಿ’ಎಂದು ತಿಳಿಸಿ ಶುಭ ಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಪಿ.ರಾಮ್ ಪ್ರಸಾದ್ ಭಟ್, ಹಾಗೂ ಸದಸ್ಯರುಗಳಾದ ಕೆ.ಆರ್.ಪಂಡಿತ್, ರಾಮ್‌ನಾಥ್ ಭಟ್,ಪ್ರೇಮಚಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್ ಮಾತನಾಡಿ ವಿದ್ಯಾರ್ಥಿ ಸಂಘಕ್ಕೆ ಶುಭ ಹಾರೈಸಿದರು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ಸಂಘ ಉತ್ತಮವಾಗಿ ಮುಂದುವರಿಯಲಿ. ಎಲ್ಲರ ಪರಿಶ್ರಮ ಸ¥s಼Àಲವಾಗಲಿ ಎಂದು ನುಡಿದರು.
ಈ ಸಂದರ್ಭದಲ್ಲಿ, ಕಾಲೇಜಿನಕಛೇರಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಮಹಾಬಲ ಇವರನ್ನುಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.ಅವರ ಬಗ್ಗೆ ಕಾಲೇಜಿನಕಛೇರಿಅಧೀಕ್ಷಕರಾಜೇಶ್‌ಕುಮಾರ್ ಮಾತನಾಡಿದರು.ಹಾಗೆಯೇ ಕಳೆದ ಶೈಕ್ಷಣಿಕ ಸಾಲಿನ ಅಂತಿಮ ಪರೀಕ್ಷೆಯಲ್ಲಿಉತ್ತಮ ಅಂಕಗಳನ್ನು ಪಡೆದ ಪದವಿ ಹಾಗೂ ಪದವಿ ಪೂರ್ವತರಗತಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ನಾಯಕಿ ಶ್ರುತಿ ಪೇರಿ ಮಾತನಾಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದಾಗಿ ತಿಳಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥಡಾ.ಪ್ರವೀಣ್ ಸಾಧಕರ ವಿವರ ನೀಡಿದರು. ವಿದ್ಯಾರ್ಥಿ ಸಂಘದ ಪದವಿಪೂರ್ವ ವಿಭಾಗದಉಪಾಧ್ಯಕ್ಷ ಕೌಶಿಕ್ ಟಿ ಪೂಜಾರಿ ಮತ್ತು ತುಳು ಸಂಘದ ಕಾರ್ಯದರ್ಶಿ ದೀಪಶ್ರೀ ಅತಿಥಿಗಳ ಪರಿಚಯ ನೀಡಿದರು. ವಿದ್ಯಾರ್ಥಿ ಸಂಘದ ಪದವಿ ಪೂರ್ವ ವಿಭಾಗದಜಂಟಿ ಕಾರ್ಯದರ್ಶಿ ಪೂಜಾಆಚಾರ್ಯ ಮತ್ತುಗ್ರಾಹಕ ವೇದಿಕೆ ಸಂಘದ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿಗಾರ್ ಪದಾಧಿಕಾರಿಗಳ ಪರಿಚಯ ನೀಡಿದರು. ಪದವಿ ವಿಭಾಗದ ಪ್ರಧಾನ ಕಾರ್ಯದರ್ಶಿ ರೋಹಿಸ್ಟನ್ ಪಿಂಟೊ ಸ್ವಾಗತಿಸಿ,ಜಂಟಿ ಕಾರ್ಯದರ್ಶಿ ಶೃತಿ ವಂದಿಸಿದರು. ವಿಜ್ಞಾನ ಮತ್ತು ಮಾಹಿತಿತಂತ್ರಜ್ಞಾನ ಸಂಘದ ಕಾರ್ಯದರ್ಶಿ ಸಾಮ್ಯುಯೆಲ್‌ಜೆಸ್ಟನ್ ಸೆರಾವೊಕಾರ್ಯಕ್ರಮ ನಿರೂಪಿಸಿದರು.
ಪ್ರಕಟಣೆಯ ಕೃಪೆಗಾಗಿ