ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸುಲ್ಲೇರಿಮೂಗ್ರು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10ನೇ ವರ್ಷದ ಮೊಸರು ಕುಡಿಕೆ ಉತ್ಸವ ಉದ್ಘಾಟನೆ ಕಾರ್ಯಕ್ರಮವು ಇಂದು ಬೆಳಿಗ್ಗೆ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸರಸ್ವತಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಅಳದಂಗಡಿ ಇವರು ಉದ್ಘಾಟನೆ ಮಾಡಿದರು ಅಧ್ಯಕ್ಷತೆಯನ್ನು ಹೆಚ್ ಎಲ್ ರಾವ್ ಆಡಳಿತ ಮುಖ್ಯಸ್ಥರು ಮಹಿಷ ಮರ್ದಿನಿ ದೇವಸ್ಥಾನ ನಡಿಬೆಟ್ಟು ವಹಿಸಿದರು, ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಾಲಿನಿ ಕೇಶವ ಬಂಗೇರ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಅಳದಂಗಡಿ ರವಿ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರು ಶಾಂತಿ ಕಿರಣ್ ಗ್ರಾಮ ಪಂಚಾಯತ್ ಸದಸ್ಯರು ಗೀತಾ ಮಂತುಗುಡ್ಡೆ ಅಧ್ಯಕ್ಷರು ಎ ಒಕ್ಕೂಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಕಾಶ್ ಕೊಲ್ಲಂಗೆ ಅಧ್ಯಕ್ಷರು ಬಿ ಅಧ್ಯಕ್ಷರು ಸಮಿತಿ ಒಕ್ಕೂಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರೇವತಿ ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಶಶಿಕಲಾ ಅಧ್ಯಕ್ಷರು ವರಮಲಕ್ಷ್ಮಿ ಸಮಿತಿ ಸುಲೋಚನಾ ಸೇವಾ ಪ್ರತಿನಿಧಿ ಗ್ರಾಮ ಅಭಿವೃದ್ಧಿ ಯೋಜನೆ ಮತ್ತು ಮಲ್ಲಿಕಾ ಸದಸ್ಯರು ಹಾಲು ಉತ್ಪಾದಕರ ಸಂಘ ಅಳದಂಗಡಿ ಇವರು ಎಲ್ಲರೂ ಮುಖ್ಯಯ ಅತಿಥಿಗಳಾಗಿ ಭಾಗವಹಿಸಿದರು ಸ್ವಾಗತವನ್ನು ತ್ರಿಷಾ ಅವರು ಮಾಡಿದರು ಧನ್ಯವಾದವನ್ನು ನಂದನ್ ಅವರು ನೆರವೇರಿಸಿದರು.