Sunday, July 14, 2024
Homeಮಂಗಳೂರು44ನೇಯ ವರ್ಷದ ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆ

44ನೇಯ ವರ್ಷದ ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆ

ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ ಇಲ್ಲಿ ಮಾರ್ಚ್ 28, 2024 ರಂದು 44ನೇಯ ವರ್ಷದ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನೆಯನ್ನು ಶ್ರೀ. ರಿತೇಶ್ ಶೆಟ್ಟಿ ಸೂಡ, ಯುವಜನ ಸೇವಾ ಕ್ರೀಡಾಧಿಕಾರಿ, ಕಾಪು ತಾಲೂಕು ಇವರು ನೆರವೇರಿಸಿದರು. ಮನುಷ್ಯನಿಗೆ ಮಾನಸಿಕ ಆರೋಗ್ಯದ ಜೊತೆಯಲ್ಲಿ ದೈಹಿಕ ಆರೋಗ್ಯವು ಎಷ್ಟು ಮುಖ್ಯ ಎಂದು ತಿಳಿಸಿದ್ದು ಮಾತ್ರವಲ್ಲದೆ ವಿದ್ಯಾರ್ಥಿದೆಸೆಯಲ್ಲಿನ ತಮ್ಮ ಕ್ರೀಡಾಕೂಟದ ನೆನಪುಗಳನ್ನು ಮೆಲುಕು ಹಾಕಿ, ಸೋಲೇ ಗೆಲುವಿನ ಮೆಟ್ಟಿಲು ಎಂದು ವಿದ್ಯಾರ್ಥಿಗಳಲ್ಲಿ ನವಚೈತನ್ಯವನ್ನು ತುಂಬುವುದರ ಜೊತೆಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾಲೇಜಿನ ಕ್ರೀಡಾ ನಾಯಕನಾದ ಮಹೇಶ್ ಇವರು ಕ್ರೀಡಾಪಟುಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲರದ ಡಾ. ಮಿಥುನ್ ಚಕ್ರವರ್ತಿ ಇವರು ಸ್ವಾಗತದ ಜೊತೆಗೆ ಪ್ರಾಸ್ತಾವಿಕ ಮಾತನ್ನಾಡಿದರು ಹಾಗೂ ಕಾಲೇಜಿನ ನಾಯಕನಾದ ಅಭಿಲಾಷ್ ಅವರು ಎಲ್ಲರನ್ನು ವಂದಿಸಿದರು.

RELATED ARTICLES
- Advertisment -
Google search engine

Most Popular