Wednesday, October 9, 2024
Homeರಾಜ್ಯವಾಣೀನಗರ ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ

ವಾಣೀನಗರ ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ

ಪೆರ್ಲ : ಆರ್ದ್ರಂ ಯೋಜನೆಯಂತೆ ಕಾಸರಗೋಡು ಡೆವಲಪ್‌ಮೆಂಟ್ ಪ್ಯಾಕೇಜ್ ಅನುದಾನದಲ್ಲಿ ಉನ್ನತೀಕರಿಸಿ ನಿರ್ಮಿಸಲಾದ ವಾಣೀನಗರ ಕುಟುಂಬ ಆರೋಗ್ಯ ಕೇಂದ್ರ, ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದ ನೂತನ ಕಟ್ಟಡವನ್ನು ಸೋಮವಾರ ಸಂಜೆ ಆರೋಗ್ಯ ಸಚಿವೆ ವೀಣಾ ಜಾರ್ಜ್ಆನ್ ಲೈನ್ ಮೂಲಕ‌ ಲೋಕಾರ್ಪಣೆಗೊಳಿಸಿದರು. ಮಂಜೇಶ್ವರದ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾ ಮೆಡಿಕಲ್‌ ಆಫೀಸರ್ ಶಾಂತಿ, ಎಣ್ಮಕಜೆ ಗ್ರಾಮ ಪಂಚಾಯತು ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ, ಜಿಲ್ಲಾ.ಪಂ.ಸದಸ್ಯ ನಾರಾಯಣ ನಾಯ್ಕ್ , ವಾರ್ಡ್ ಸದಸ್ಯ ರಾಮಚಂದ್ರ ಎಂ., ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಚಂದ್ರಹಾಸ ರೈ, ರಾಧಾಕೃಷ್ಣ ಭಟ್ ಪತ್ತಡ್ಕ ಶುಭ ಹಾರೈಸಿದರು. ಗ್ರಾ.ಪಂ. ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಬಿ ಹನೀಫ್, ಗ್ರಾಪಂ ಸದಸ್ಯ ನರಸಿಂಹ ಪೂಜಾರಿ ಎಸ್.ಬಿ‌., ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ನಾರಾಯಣ ರೈ ಪಂಬೆತ್ತಡ್ಕ, ರವಿ ಕೆ., ಸಿದ್ದೀಕ್ ಒಳಮೊಗರು ಉಪಸ್ಥಿತರಿದ್ದರು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೆಡಿಕಲ್ ಆಫೀಸರ್ ಡಾ.ಗ್ರೀಷ್ಮ ಪಿ‌.ಆರ್. ವಂದಿಸಿದರು. ಪ್ರಭಾರ ಆರೋಗ್ಯ ನಿರೀಕ್ಷಕ ಸಜಿತ್ ವಿ.ನಿರೂಪಿಸಿದರು.

RELATED ARTICLES
- Advertisment -
Google search engine

Most Popular