Tuesday, April 22, 2025
Homeಮಂಗಳೂರುಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ, ಸುರತ್ಕಲ್ ಮಳೆ ನೀರು ಕೊಯ್ಲು ಯಂತ್ರೋಪಕರಣ ಘಟಕದ...

ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ, ಸುರತ್ಕಲ್ ಮಳೆ ನೀರು ಕೊಯ್ಲು ಯಂತ್ರೋಪಕರಣ ಘಟಕದ ಉದ್ಘಾಟನೆ

ಮಂಗಳೂರು : “ರೋಟರಿ ಸಂಸ್ಥೆಯು ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದವರ ಮೂಲಭೂತ ಸೌಕರ್ಯಕ್ಕೆ ಸ್ಪಂದಿಸುತ್ತಿದ್ದು, ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ” ಎಂದು ರೋಟರಿ ಜಿಲ್ಲಾ 3181ರ ಗವರ್ನರ್‌ರಾದ ರೋ| ವಿಕ್ರಮ್‌ದತ್ತರವರು ಮಾಹಿತಿ ನೀಡಿದ್ದಾರೆ. ಅವರು ರೋಟರಿ ಕ್ಲಬ್ ಸುರತ್ಕಲ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ತಾ. 24.03.2025 ರಂದು ಸುರತ್ಕಲ್‌ನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ವಿದ್ಯಾ ವಿನಾಯಕ ಆವರಣದಲ್ಲಿ ರೋಟರಿ ಸಂಸ್ಥೆಯು ನಿರ್ಮಿಸಿದ್ದ ರೂ.2,00,000/- ಮೌಲ್ಯದ ಮಳೆ ನೀರು ಕೊಯ್ಲಿನ ಯಂತ್ರೋಪಕರಣ ಘಟಕವನ್ನು ಉದ್ಘಾಟಿಸಿ
ಮಾತನಾಡಿದರು. ವಿಶ್ವದಲ್ಲಿ ಮಕ್ಕಳನ್ನು ಬಾಧಿಸುವ ರೋಗವಾದ ಪೋಲಿಯೋವನ್ನು ನಿರ್ಮೂಲನೆಗೊಳಿಸಿದ ಸೇವಾಕಾರ್ಯ ಅಂತರಾಷ್ಟ್ರೀಯ ಜನಮನ್ನಣೆಗೆ ಪಾತ್ರವಾಗಿದೆ ಎಂದು ನುಡಿದರು. ಬಳಿಕ ರೋಟರಿ ಸಂಸ್ಥೆಯವರು ಶಾಲೆಗೆ ದಾನದ ರೂಪದಲ್ಲಿ ನೀಡಿದ ರೂ.40,000/- ಮೌಲ್ಯದ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮ ಉಪಕರಣವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ನಾಗವೇಣಿ ಮತ್ತು ಮಾಲಿನಿ ಬಂಗೇರವರಿಗೆ ಹಸ್ತಾಂತರಿಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿಯವರು ಮಳೆ ನೀರು ಕೊಯ್ಲಿನ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಮಳೆ ನೀರನ್ನು ಸಂಗ್ರಹಿಸಿ ನೀರಿನ ಅಭಾವವನ್ನು ಪರಿಹರಿಸಬೇಕೆಂದು ಸಲಹೆ ನೀಡಿದರು. ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ರಮಾನಂದ ರಾವ್ ರವರು ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ರೋಟರಿ ವಲಯ ಸಹಾಯಕ ಗವರ್ನರ್‌ರಾದ ರೋ| ಡಾ| ರಂಜನ್ ಮತ್ತು ರೋ| ಕೆ.ಎಂ.ಹೆಗ್ಡೆಯವರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಸುರತ್ಕಲ್‌ನ ಅಧ್ಯಕ್ಷರಾದ ಸಂದೀಪ್ ರಾವ್ ಸ್ವಾಗತಿಸಿದರು. ರೋಟರಿ ಕ್ಲಬ್ ಸಿಟಿ ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಕೊಡ್ಲಮೊಗರು ವಂದಿಸಿದರು.

ವರದಿಗಾರರು
(ಎಂ.ವಿ. ಮಲ್ಯ)
98440 40927 / 95916 71310

RELATED ARTICLES
- Advertisment -
Google search engine

Most Popular