ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಕಿರಿಮಂಜೇಶ್ವರ ಗ್ರಾಮಪಂಚಾಯತ್ ಮತ್ತು ಸಂಜೀವಿನಿ ಶೆಡ್ ರಚನೆ
ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಘನ ತ್ಯಾಜ್ಯ ವಾಹನಕ್ಕೆ ಚಾಲನೆ ಮತ್ತು ಕಿರಿಮಂಜೇಶ್ವರ ಗ್ರಾಮದ ನಾಗೂರು ಗ್ರಾಮೀಣ ಸಂತೆ ಉನ್ನತ ಮಟ್ಟದಲ್ಲಿ ಕಾರ್ಯರಂಭಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಒಂದು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಿ ವಿವಿಧ ಕಾಮಗಾರಿ ಉದ್ಘಾಟನೆ ಮತ್ತು ವಿಶೇಷವಾಗಿ ಗ್ರಾಮೀಣ ರೈತರಿಗೆ ಉಪಯೋಗವಾಗುವಂತಹ ಗ್ರಾಮೀಣ ಸಂತೆ ಉನ್ನತ ಮಟ್ಟದಲ್ಲಿ ಮಾಡುವ ನಿಮ್ಮ ಪರಿಕಲ್ಪನೆ ಶ್ಲಾಘನೀಯ ಇದರಿಂದ ಅನೇಕ ರೈತರು ಉಪಯೋಗವನ್ನು ಪಡೆದುಕೊಳ್ಳುತ್ತಾರೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶಾಸಕರು ಸಂತೆಯಲ್ಲಿ ವಿವಿಧ ಹಣ್ಣು ತರಕಾರಿಯನ್ನು ಖರೀದಿಸುವ ಮೂಲಕ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಿದರು
ಈ ಸಂದರ್ಭದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ ಉಪ್ಪುಂದ,ಅಗಸ್ತ್ಯೇಶ್ವರ ದೇವಸ್ಥಾನ ಕಿರಿಮಂಜೇಶ್ವರ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಐತಾಳ್ , ಸಹಾಯಕ ಇಂಜಿನಿಯರ್ ನಾಗಶಯನಾ ನರೇಗಾ ಇಂಜನೀರ ಶಿವಾನಂದ್, ಗುತ್ತಿಗೆದಾರರು ನಕ್ಷತ್ರ ಬೋವಿ, ಗ್ರಾಮ ಪಂಚಾಯತ್ ಸರ್ವ ಸದಸ್ಯರಾದ ರಾಜು ದೇವಾಡಿಗ, ಈಶ್ವರ ದೇವಾಡಿಗ, ಸುಬ್ಬಣ್ಣ ಶೆಟ್ಟಿ, ಕೃಷ್ಣ ಖಾರ್ವಿ ರಮೇಶ ಖಾರ್ವಿ, ಆನಂದ ಪೂಜಾರಿ, ಸಂತೋಷ ಮೊಗವೀರ, ಕೃಷ್ಣ ಸರಸ್ವತಿ ನೈರಿ ಜಯಲಕ್ಷ್ಮಿ, ವಿಶಾಲ ವಸಂತಿ, ಶಶಿಕಲಾ, ನೇತ್ರಾವತಿ ಮತ್ತು ಗಣ್ಯರು, ಪಂಚಾಯತ್ ಸಿಬ್ಬಂದಿ ವರ್ಗ,
ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಖಾರ್ವಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು . ಪಂಚಾಯತ್ ಪಿ.ಡಿ.ಒ ರಾಜೇಶ್ ನಿರೂಪಿಸಿ ವಂದಿಸಿದರು.