ಕಾಪು ಶ್ರೀ ಮಾರಿಯಮ್ಮತನ್ನ ದೈವಿಕ ಶಕ್ತಿಯಿಂದ ದೇಶ ವಿದೇಶದ ಭಕ್ತರಿಗೆ ಅಭಯ ಪ್ರೇರಣೆ ನೀಡಿ ತನ್ನ ಕ್ಷೇತ್ರ ಅಭಿವೃದ್ಧಿ ಕಾರ್ಯಕ್ಕೆ ಕಂಕಣ ಬದ್ಧರಾಗುವಂತಾಗಿಸುತ್ತಿರುವುದು ವಿಶೇಷತೆಯೇ ಸರಿ. ಇದರಂತೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿಗಾಗಿ ಯುಎಇ ಘಟಕ ಸ್ಥಾಪನೆಗೊಂಡಿದ್ದು ಇದರ ಉದ್ಘಾಟನಾ ಕಾರ್ಯ ಇತ್ತೀಚೆಗೆ ನಡೆಯಿತು.
ಸಂದರ್ಭದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಘಟಕದ ಕಾರ್ಯ ಅಧ್ಯಕ್ಷರಾದ ವಾಸುದೇವ ಶೆಟ್ಟಿಯವರು ಸಭೆಯನ್ನದ್ದೇಶಿಸಿ ಮಾತನಾಡುತ್ತಾ “ದೇಶ ವಿದೇಶಗಳಲ್ಲಿ ನನ್ನ ಹಲವಾರು ಭಕ್ತರು ಇದ್ದರೆ ಅವರಿಗೆ ನನ್ನ ಬಗ್ಗೆ ಪ್ರಚಾರ ನೀಡಿ ಪ್ರೇರಣೆ ನಾನು ನೀಡುತ್ತೆನೆ.ಹಣವನ್ನು ಬಾಯಿ ಬಿಟ್ಟು ಕೇಳಬೇಡಿ,ರಶಿದಿ ಪುಸ್ತಕ ತೆಗೆದುಕೊಂಡು ಹೋಗಬೇಡಿ ಅವರಿಗೆ ಜೀರ್ಣೋದ್ಧಾರದ ಕಾರ್ಯದ ಬಗ್ಗೆ ಮಾಹಿತಿ ನೀಡಿ ಹಣ ಸಿಗುವ ಹಾಗೆ ನಾನು ಅವರಿಗೆ ಪ್ರೇರಣೆ ನಾನು ನೀಡುತ್ತೇನೆ ಇದು ಕಾಪು ಅಮ್ಮನ ಅಭಯದ ನುಡಿ ಎಂದು ಅವರು ಸ್ಷಷ್ಟಪಡಿಸಿದರು.
ಅಂತರಾಷ್ಟ್ರೀಯ ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆವಹಿಸಿ ಮಾತನಾಡುತ್ತಾ “ಯುಎಇಯಲ್ಲಿ ಇರುವ ಎಲ್ಲಾ ಸಮಾಜದ ಸಂಘ ಸಂಸ್ಥೆಗಳಿಗೆ ಈ ಜೀರ್ಣೋದ್ಧಾರದ ಮಾಹಿತಿ ನಾವೆಲ್ಲರೂ ನೀಡಬೇಕು ಹಾಗೂ ಯುಎಇ ಘಟಕದ ವತಿಯಿಂದ ಅತ್ಯಧಿಕ ಮೊತ್ತವನ್ನು ನೀಡಿ ಅಮ್ಮನ ಕೃಪೆಗೆ ಪಾತ್ರರಾಗಬೇಕು” ಎಂದು ಕರೆ ನೀಡಿದರು.
ಯುಎಇ ಘಟಕವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಯುಎಇ ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡುತ್ತಾ ನನ್ನ ಊರು ಕುಂದಾಪುರವಾದರು ನನ್ನ ಶ್ರೀಮತಿ ಬ್ರಹ್ಮಾವರದವಳಾದರು ಕಾಪುವಿನ ಅಮ್ಮನಿಗೆ ಎಲ್ಲರೂ ಮಕ್ಕಳಿಗೆ ಸಮಾನ.ಕಾಪುವಿನ ಅಮ್ಮನಿಗೆ ಊರು ಮುಖ್ಯವಲ್ಲ ಅಮ್ಮನ ಮುಂದೆ ಭಯ ಭಕ್ತಿ ಮುಖ್ಯ ಎಂದು ಹೇಳುತ್ತ ಯುಎಇಯಲ್ಲಿರು ಎಲ್ಲರೂ ಕೈ ಜೋಡಿಸಬೇಕೆಂದು” ಕರೆ ನೀಡಿದರು.ಉದ್ಯಮಿಗಳಾದ ಸುಂದರ ಶೆಟ್ಟಿ, ಪ್ರೆಮ್ ನಾಥ್ ಶೆಟ್ಟಿ,ಸುಜತ್ ಶೆಟ್ಟಿ ಮಾತನಾಡಿ ಘಟಕಕ್ಕೆ ಶುಭವನ್ನು ಹಾರೈಸಿದರು.
ವೇದಿಕೆಯಲ್ಲಿ ಊರಿಂದ ಆಗಮಿಸಿದ ಅತಿಥಿಗಳಾಗಿ ಮುಂಬಯಿ ಘಟಕದ ಅಧ್ಯಕ್ಷರಾದ ಸುಧಾಕರ ಹೆಗ್ಡೆ, ಹಣಕಾಸು ಸಂಸ್ಥೆಯ ಮುಖ್ಯಸ್ಥ ಉದಯ ಸುಂದರ ಶೆಟ್ಟಿ, ಮನೋಹರ ಸುಂದರ ಶೆಟ್ಟಿ, ರತ್ನಾಕರ ಶೆಟ್ಟಿಯವರು ಸರ್ವರ ಭಕ್ತಾಧಿ ಬಂಧುಗಳ ಸಂಪೂರ್ಣ ಬೆಂಬಲ ನೀಡಿ ಕಾರ್ಯ ಯೋಜನೆಯನ್ನು ಸಂಪೂರ್ಣ ಫಲಪ್ರದವಾಗಿಸಲು ಮನವಿಯನ್ನು ಮಾಡಿ ನೂತನ ಘಟಕದ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭವನ್ನು ಹಾರೈಸಿದರು.
.ನಂತರ ನಡೆದ ಯುಎಇ ಘಟಕ ರೂಪಿಕರಣ ಕಾರ್ಯಕ್ರಮದಲ್ಲಿ ಯುಎಇ ಘಟಕಕ್ಕೆ ಒಂಬತ್ತು ಮಂದಿ ಸಂಚಾಲಕರನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಫಾರ್ಚೂನ್ ಗ್ರೂಪ್ ಅಫ್ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರನ್ನು ಅಯ್ಕೆ ಮಾಡಲಾಯಿತು.ಸಂಚಾಲಕರಾಗಿ ಆಕ್ಮೆ ಬಿಲ್ಡಿಂಗ್ &ಮೆಟೀರಿಯಲ್ಸ್ ಸಂಸ್ಥೆಯ ಅಧ್ಯಕ್ಷರಾದ ಹರೀಶ್ ಶೇರಿಗಾರ್, ದುಬೈ ಸೋರ್ಸ್ ನ ಹರೀಶ್ ಬಂಗೆರ,ಬಿಲ್ಲವಾಸ್ ದುಬೈಯ ಸತೀಶ್ ಪೂಜಾರಿ, ಸುಧಾಕರ ರಾವ್ ಪೇಜಾವರ, ದಿನೇಶ್ ಶೆಟ್ಟಿ ಕೊಟಿಂಜ, ರಘುರಾಮ ಶೆಟ್ಟಿಗಾರ್, ರಾಮಚಂದ್ರ ಹೆಗ್ಡೆ,ಬಾಲಕೃಷ್ಣ ಸಾಲಿಯಾನವರನ್ನು ಆಯ್ಕೆ ಮಾಡಲಾಯಿತು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಯುಎಇ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ನವ ದುರ್ಗೆಯ ಪ್ರತೀತಿಯಾಗಿ ಒಂಬತ್ತು ಸಮಾಜದ ಸದಸ್ಯರನ್ನು ಸಂಚಾಲಕರನ್ನು ಅಯ್ಕೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಘಟಕಗಳನ್ನು ಸ್ಥಾಪಿಸುವುದಾಗಿ ಕಾಪು ಅಮ್ಮನ ಅಭಯವಾಗಿದೆ. ಇದರಂತೆ ಕಳೆದ ಶುಕ್ರವಾರ ಒಮಾನ್ ನಲ್ಲಿ ಅಂತರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿಯವರನ್ನು ಆಯ್ಕೆ ಮಾಡಿ ಒಮಾನ್ ಘಟಕ ಸ್ಥಾಪಕ ಮಾಡಿದ್ದು ಇಂದು ಯುಎಇ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾವು ಸೇರಿದ್ದೆವೆ. ನಿಮ್ಮಲ್ಲಿ ಅಷ್ಟು ಕೊಡಿ ಇಷ್ಟು ಕೊಡಿ ಅಂತ ಕೇಳಲ್ಲ ತಾಯಿ ನಿಮಗೆ ಪ್ರೇರಣೆ ನೀಡಿದ ಹಾಗೆ ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯಕ್ಕೆ ಸಹಕರಿಸಿ ಎಂದು ಹೇಳುತ್ತ ಒಂದು ಶಿಲೆಗೆ 999 ರೂಪಾಯಿ,9 ಶಿಲೆಗೆ 9,999/- , 99 ಶಿಲೆಗೆ 99,999/- , 999 ಶಿಲೆಗೆ 9,99,999/- ಮತ್ತು 99999 ಶಿಲೆಗೆ 99,99,999 ರೂಪಾಯಿ ಎಂದು ಶಿಲೆ ಸೇವೆಯ ಬಗ್ಗೆ ಮಾಹಿತಿ ನೀಡಿದರು.ಭರದಿಂದ ಜೀರ್ಣೋದ್ಧಾರವಾಗುತಿರುವ ಕಾಪು ಹೊಸ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಯುಎಇ ಘಟಕವು ನಗರದ ಫಾರ್ಚೂನ್ ಪ್ಲಾಜಾದ ಬಾಂಕ್ವೆಟ್ ಸಭಾಂಗಣದಲ್ಲಿ ಯುಎಇಯ ನೂರಾರು ಕಾಪು ಅಮ್ಮನ ಭಕ್ತರ ಸಮ್ಮುಖದಲ್ಲಿ ಜರಗಿತು.ಸನ್ನಿದಿ ವಿಶ್ವನಾಥ ಶೆಟ್ಟಿ ಪ್ರಾರ್ಥನೆ ಹಾಡಿದರು. ಸರ್ವೋತ್ತಮ ಶೆಟ್ಟಿ ಸ್ವಾಗತಿಸಿ ಬಿ.ಕೆ.ಗಣೇಶ್ ರೈ ಕಾರ್ಯಕ್ರಮ ನಿರೂಪಿಸಿದರು.
.