ವಾಮಂಜೂರು : ಸೆ 1 ನೇ ಭಾನುವಾರದಂದು ಅಮೃತ ನಗರ ಸರ್ಕಲ್ ಹತ್ತಿರ, ವಾಮಂಜೂರು ಲಿಂಗ ಮಾರು ಗುತ್ತು ದಿ. ಶಿವಣ್ಣ ಶೆಟ್ಟಿಯವರ ಸ್ಮರಣಾರ್ಥ ನಿರ್ಮಿಸಿದ ನೂತನ ಬಸ್ ತಂಗುದಾಣದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿ ಇವರಿಂದ ಉಚಿತ ವೈದ್ಯಕೀಯ ಶಿಬಿರ ಬೆಳಿಗ್ಗೆ 9:00 ಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನೆರವೇರಿತು.
ಈ ಎಲ್ಲ ಕಾರ್ಯಕ್ರಮಗಳು ಪೌರ ಸಮಿತಿ (ರಿ) ಅಮೃತನಗರ ನಡೆಸಿಕೊಟ್ಟಿತು. ರಾಜೇಶ್ ಶೆಟ್ಟಿ ಹಿರಿಯ ವಿಭಾಗಿಯ ಅಧಿಕಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರವೀಣ್ ಚಂದ್ರ ಆಳ್ವ ತಿರುವೈಲು ಗುತ್ತು, ವಿರೋಧ ಪಕ್ಷದ ನಾಯಕರು, ಮಂಗಳೂರು ಮಹಾನಗರ ಪಾಲಿಕೆ ಹೇಮಲತಾ ರಘು ಸಾಲಿಯಾನ್ ಸದಸ್ಯರು, ತಿರುವೈಲು ವಾರ್ಡ್ , ಮಂಗಳೂರು ಮಹಾನಗರ ಪಾಲಿಕೆ ರಾಜೇಶ್ ಕೊಟ್ಟಾರಿ, ಅಧ್ಯಕ್ಷರು, ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ, ರಾಜಕುಮಾರ್ ಶೆಟ್ಟಿ , ಉಪಾಧ್ಯಕ್ಷರು, ಪೌರ ಸಮಿತಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೌರ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಗಾರ್ ವಹಿಸಿದ್ದರು. ವೈದ್ಯಕೀಯ ಶಿಬಿರವನ್ನು ಡಾ. ಕಾರ್ತಿಕ್ ರೈ ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ತಮ್ಮ ತಂದೆಯ ಸವಿ ನೆನಪಿಗಾಗಿ ಬಸ್ ತಂಗುದಾಣವನ್ನು ಕೊಡುಗೆಯಾಗಿ ನೀಡಿದ ರಾಜಕುಮಾರ ಶೆಟ್ಟಿ ಅವರನ್ನು ಹಾಗೂ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಹಲವು ಮಹನೀಯರನ್ನು ಸನ್ಮಾನಿಸಲಾಯಿತು.