ಚುನಾವಣಾ ಫಲಿತಾಂಶ -4
ಎನ್ ಡಿಎ ಎಷ್ಟು? ಇಂಡಿಯಾ ಎಷ್ಟು? ಇಲ್ಲಿದೆ ಮಾಹಿತಿ
ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮೂರನೇ ಹಂತದ ಮತ ಎಣಿಕೆ ಪೂರ್ಣಗೊಳ್ಳುತ್ತಿದೆ. ಆರಂಭದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಭಾರೀ ಮುನ್ನಡೆಯಾಗಿತ್ತಾದರೂ, ಈಗ ಚುನಾವಣೋತ್ತರ ಸಮೀಕ್ಷೆಗಳಿಗೆ ಉಲ್ಟಾ ಹೊಡೆದು ಎನ್ ಡಿಎ ಮುನ್ನಡೆಯತ್ತ ಸಾಗಿದೆ. ಆದರೂ ಒಟ್ಟಾರೆ ಸ್ಥಾನಗಳಲ್ಲಿ ಎನ್ ಡಿಎ ಇನ್ನೂ ಮುನ್ನಡೆ ಕಾಪಾಡಿಕೊಂಡು ಬಂದಿದೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಎನ್ ಡಿ ಎ 286 ಮತ್ತು ಇಂಡಿಯಾ ಒಕ್ಕೂಟ 223 ಮತ್ತು ಇತರರು 23 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಆದರೆ ರಾಜ್ಯದಲ್ಲಿ ಬಿಜೆಪಿ ಮಿತ್ರಕೂಟ ಮುನ್ನಡೆ ಸಾಧಿಸುವ ಲಕ್ಷಣವಿದೆ.