Saturday, February 15, 2025
Homeಬಂಟ್ವಾಳಗೋವಾದಲ್ಲಿ ಮಹಮ್ಮದ್ ಶರೀಫರಿಗೆ ಭಾರತ ಗೌರವ ಪ್ರಶಸ್ತಿ ಪ್ರಧಾನ

ಗೋವಾದಲ್ಲಿ ಮಹಮ್ಮದ್ ಶರೀಫರಿಗೆ ಭಾರತ ಗೌರವ ಪ್ರಶಸ್ತಿ ಪ್ರಧಾನ

ಬಂಟ್ವಾಳ : ಸರ್ಕಾರಿ ಶಾಲೆಗೆ ಬಿಸಿ ಊಟಕ್ಕಾಗಿ ಉಚಿತವಾಗಿ ತರಕಾರಿಯನ್ನು ಪೂರೈಸುತ್ತಿರುವ ಬಂಟ್ವಾಳ ತಾಲೂಕಿನ ಮೆಲ್ಕಾರ್ ಚಂದ್ರಿಕಾ ವೆಜಿಟೇಬಲ್ ನ ಮಾಲಕ ಮಹಮ್ಮದ್ ಶರೀಫ್ ಅವರಿಗೆ ಗೋವಾದ ಪಣಜಿಯಲ್ಲಿ “ಭಾರತ ಗೌರವ” ಪ್ರಶಸ್ತಿ ಪ್ರದಾನವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜ್ಜಬ್ಬ ಮಾಡಿದರು. ಸಾಂತ್ವನ ಫೌಂಡೇಶನ್ ಬೆಂಗಳೂರು ಹಾಗೂ ಕಲ್ಲಂಗುಟಿ ಕನ್ನಡ ಸಂಘ ಪಣಜಿ ಸಯೋಗದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಹಮ್ಮದ್ ಶರೀಫರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಪರಿಗಣಿಸಿ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಾಂತ್ವನ ಫೌಂಡೇಶನ್ ಅಧ್ಯಕ್ಷರಾದ ಡಾ. ಪವಿತ್ರ ರೆಡ್ಡಿ. ಕಲ್ಲಂಗುಟ್ ಕನ್ನಡ ಸಂಘದ ಅಧ್ಯಕ್ಷರಾದ ಮುರಳಿ ಮೋಹನ್ ಶೆಟ್ಟಿ. ಮತ್ತು ಖ್ಯಾತ ಹಿನ್ನೆಲೆ ಗಾಯಕರಾದ ಬದರಿ ಪ್ರಸಾದ್ ಹಾಗೂ ಕಾರ್ಯಕ್ರಮದ ಆಯೋಜಕರಾದ ಮಾರುತಿ ಬಡಿಗೇರ್ ವೇದಿಕೆಯಲ್ಲಿದ್ದರು.

RELATED ARTICLES
- Advertisment -
Google search engine

Most Popular