Saturday, December 14, 2024
HomeUncategorizedಭಾರತೀಯ ಜೈನ್‌ಮಿಲನ್: ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ

ಭಾರತೀಯ ಜೈನ್‌ಮಿಲನ್: ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ

ಬೆಳ್ತಂಗಡಿಯಲ್ಲಿ ನ. ೨೪ (ಬಾಕ್ಸ್ ಐಟಂ)ಉಜಿರೆ: ಭಾರತೀಯ ಜೈನ್‌ಮಿಲನ್ ವಲಯ ೮ರ ಮಂಗಳೂರು ವಿಭಾಗಮಟ್ಟದ ಜಿನಭಜನಾ ಸ್ಪರ್ಧೆಯು ನ. ೨೪ ರಂದು ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಸಹಯೋಗದೊಂದಿಗೆ ನಡೆಯಲಿದೆ ಎಂದು ಜಿನಭಜನೆ  ಸ್ಪರ್ಧೆ ಸಂಯೋಜಕರಾದ ಉಜಿರೆಯ ಸೋನಿಯಾಯಶೋವರ್ಮ ಮತ್ತು ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷರಾದ ಡಾ. ನವೀನ್ ಕುಮಾರ್ ಜೈನ್ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿನಭಜನೆ ತಂಡಗಳು ಸ್ಥಳೀಯ ಜೈನ್‌ಮಿಲನ್ ಮೂಲಕ  ಹೆಸರು ನೋಂದವಣೆ ಮಾಡಬೇಕು. ಹೆಸರು ನೋಂದಾವಣೆಗೆ ಕೊನೆಯ ದಿನಾಂಕ ೧೫-೧೧-೨೦೨೪ .
ವಿಭಾಗಮಟ್ಟದಲ್ಲಿ ಆಯ್ಕೆಯಾದ ತಂಡಗಳು ೨೦೨೫ರ  ಜನವರಿ ೪ ಮತ್ತು ೫ ರಂದು ಬೆಂಗಳೂರಿನಲ್ಲಿ ನಡೆಯುವ ಉಪಾಂತ್ಯ ಮತ್ತು ಅಂತಿಮಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತವೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಡಾ. ನವೀನ್‌ಕುಮಾರ್ ಜೈನ್ :ಮೊಬೈಲ್: ೯೬೬೪೦೭೩೮೫೬
ಡಾ. ರಜತ ಪಿ. ಶೆಟ್ಟಿ : ಮೊಬೈಲ್ : ೯೪೮೧೫೧೨೬೨೬

RELATED ARTICLES
- Advertisment -
Google search engine

Most Popular