Saturday, September 14, 2024
Homeಆರ್ಥಿಕಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಫುಲ್ ಟ್ಯಾಂಕ್ ಮಾಡಿಸಿದ್ರೆ ಯಾವುದೇ ಸಮಸ್ಯೆಯಿಲ್ಲ: ಇಂಡಿಯನ್ ಆಯಿಲ್ ಸ್ಪಷ್ಟನೆ

ಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಫುಲ್ ಟ್ಯಾಂಕ್ ಮಾಡಿಸಿದ್ರೆ ಯಾವುದೇ ಸಮಸ್ಯೆಯಿಲ್ಲ: ಇಂಡಿಯನ್ ಆಯಿಲ್ ಸ್ಪಷ್ಟನೆ

ನವದೆಹಲಿ: ತನ್ನ ಹೆಸರಲ್ಲಿ ಹರಡಲಾಗುತ್ತಿರುವ ಸುಳ್ಳು ಸುದ್ದಿಯೊಂದಕ್ಕೆ ಸಂಬಂಧಿಸಿ ಇಂಡಿಯನ್ ಆಯಿಲ್ ಕಂಪನಿ ಸ್ಪಷ್ಟನೆ ನೀಡಿದೆ. ಬಿರುಬೇಸಿಗೆಯಲ್ಲಿ ವಾಹನಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್, ಡಿಸೇಲ್ ಹಾಕಿಸಬೇಡಿ ಎಂದು ವಾಹನ ಸವಾರರಿಗೆ ತಮ್ಮ ಕಂಪನಿ ಎಚ್ಚರಿಕೆ ನೀಡಿದೆ  ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಎಂದು ಕಂಪನಿ ಸ್ಪಷ್ಟಪಡಿಸಿದೆ.

ವಾಹನ ತಯಾರಕರು ಕಾರ್ಯಕ್ಷಮತೆಯ ಅಗತ್ಯತೆ ಮತ್ತು ಅಂತರ್ನಿರ್ಮಿತ ಸುರಕ್ಷತಾ ಅಂಶಗಳೊಂದಿಗೆ ಸುತ್ತುವರಿದ ಪರಿಸ್ಥಿತಿಗಳ ಬಗ್ಗೆ ಎಲ್ಲಾ ಅಂಶಗಳನ್ನು ಪರಿಗಣಿಸಿ ವಾಹನಗಳನ್ನು ವಿನ್ಯಾಸಗೊಳಿಸುತ್ತಾರೆ. ಪೆಟ್ರೋಲ್/ಡಿಸೇಲ್ ವಾಹನಗಳ ಇಂಧನ ಟ್ಯಾಂಕ್ ನಲ್ಲಿ ಸೂಚಿಸಲಾದ ಗರಿಷ್ಠ ಪರಿಮಾಣವು ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಚಳಿಗಾಲ ಅಥವಾ ಬೇಸಿಗೆಯನ್ನು ಲೆಕ್ಕಿಸದೆ ವಾಹನ ತಯಾರಕರು ನಿರ್ದಿಷ್ಟಪಡಿಸಿದ ಗರಿಷ್ಠ ಮಿತಿಯವರೆಗೆ ವಾಹನಗಳಲ್ಲಿ ಇಂಧನ ತುಂಬುವುದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಆಧುನಿಕ ಇಂಧನ ಟ್ಯಾಂಕ್ ಗಳನ್ನು ಸುರಕ್ಷಷತಾ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದನ್ನು ವಾಹನ ಚಾಲಕರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್ ಪುಣೆ ಅಧದ್ಯಕ್ಷ ಧ್ರುವ್್ ರೂಪಾರೆಲ್ ತಿಳಿಸಿದ್ದಾರೆ.

ಸರ್ಕಾರಿ ಅಥವಾ ಕಂಪನಿಯ ಅಧಿಕೃತ ವೆಬ್ ಸೈಟ್ ಗಳಲ್ಲಿ ಪ್ರಕಟವಾಗದ ಹೊರತಾಗಿ, ಯಾವುದದೇ ವೈರಲ್ ಸುದ್ದಿಗಳನ್ನು ಜನರು ನಂಬಬೇಡಿ ಎಂದು ಅವರು ಮನವಿ ಮಾಡಿದ್ದಾರೆ.   

RELATED ARTICLES
- Advertisment -
Google search engine

Most Popular