Saturday, February 15, 2025
Homeಮೂಡುಬಿದಿರೆಮಾಂಟ್ರಾಡಿ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೌಲಭ್ಯಗಳ ಮಾಹಿತಿ

ಮಾಂಟ್ರಾಡಿ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೌಲಭ್ಯಗಳ ಮಾಹಿತಿ

ಮೂಡುಬಿದಿರೆ : ತಾಲೂಕಿನ ಶಿರ್ತಾಡಿ ಸಮೀಪದ ಮಾಂಟ್ರಾಡಿ ಉನ್ನತೀಕರಿಸಿದ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಬೆಂಗಳೂರು ಸೂರ್ಯ ಫೌಂಡೇಶನ್ ನ ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಮಾಹಿತಿಯನ್ನು ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಒಂದನೇ ತರಗತಿಯಿಂದ ಪ್ರಸ್ತುತ ಹತ್ತನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡುವುದರಿಂದ ಸರ್ಕಾರ ಗ್ರಾಮೀಣ ಕೃಪಾಂಕ ನೀಡುತ್ತಿದೆ.

ಅಲ್ಲದೆ ಕನ್ನಡ ಮಾಧ್ಯಮದಲ್ಲಿಯೇ ಒಂದನೇ ತರಗತಿಯಿಂದ ಹತ್ತನೇ ತರಗತಿಯ ತನಕ ಕಲಿಯುವುದರಿಂದ ಹೆಚ್ಚುವರಿ ಕನ್ನಡ ಕೃಪಾಂಕ ಪಡೆದು ಇತರರಿಗಿಂತ ಆದ್ಯತೆಯಲ್ಲಿ ಮೊದಲು ಉದ್ಯೋಗ ಪಡೆಯಲು ಸಾಧ್ಯವಿದೆ. ಆದುದರಿಂದ ಒಂದು ದಿನವೂ ಬದಲಾಯಿಸದೆ ಗ್ರಾಮೀಣ ಹಾಗೂ ಕನ್ನಡ ಶಾಲೆಯಲ್ಲಿ ಕಲಿಯುವುದರಿಂದ ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಕೇಳಿಕೊಂಡರು.
ಮುಖ್ಯ ಶಿಕ್ಷಕಿ ಮೃದುಲಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರುಗಳಾದ ರಾಧಿಕಾ, ರೂಪಾ, ಶಾಹಿರಾ ವೇದಿಕೆಯಲ್ಲಿ ಹಾಜರಿದ್ದರು. ಹಿರಿಯ ಶಿಕ್ಷಕರಾದ ಅರ್ಚನಾ ಸ್ವಾಗತಿಸಿದರು. ಶಿಕ್ಷಕ ವಿನಾಯಕ್ ನಾಯ್ಕ ವಂದಿಸಿದರು.

RELATED ARTICLES
- Advertisment -
Google search engine

Most Popular