ಹಳೆಯಂಗಡಿ: ದಿನಾಂಕ:26 -10 – 2024 ನೇ ಶನಿವಾರ ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ನಾರಾಯಣ ಸನಿಲ್ ಸರಕಾರಿ ಪದವಿಪೂರ್ವ ಕಾಲೇಜು ಹಳೆಯಂಗಡಿ ಇಲ್ಲಿಯ ಪ್ರೌಢಶಾಲಾ ವಿಭಾಗದಲ್ಲಿ ಮಂಗಳೂರು ಉತ್ತರ ವಲಯ ಪ್ರೌಢಶಾಲಾ ಕೋರ್ ಶಿಕ್ಷಕರ ಸಮಾಲೋಚನಾ ಸಭೆ ನಡೆಯಿತು. ಪಡುಬಿದ್ರೆ ಅಂಚನ್ ಕ್ಲಿನಿಕ್ ನ ಖ್ಯಾತ ವೈದ್ಯರಾದ ಡಾ| ಎನ್.ಟಿ. ಅಂಚನ್ ಇವರಿಂದ ಶಿಕ್ಷಕರಿಗಾಗಿ “ನಮ್ಮೂರ ಸಸ್ಯಗಳು ನಮಗಾಗಿ ‘ ಎನ್ನುವ ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಮ್ಮ ಸುತ್ತ ಮುತ್ತಲಿರುವ ಸಸ್ಯಗಳ ಪರಿಚಯ ಹಾಗೂ ಅವುಗಳಲ್ಲಿರುವ ಔಷಧೀಯ ಗುಣಗಳನ್ನು ತಿಳಿಸಿದರು. ಈ ಮೂಲಕ ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಮಾಡಿದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ ಸ್ಪಾಯರ್ ನ ಅಧ್ಯಕ್ಷರಾದ ಲಯನ್ ಕೆ .ಶಿವಪ್ರಸಾದ್, ಪ್ರಾಂತ್ಯಾಧ್ಯಕ್ಷರಾದ ವೆಂಕಟೇಶ ಹೆಬ್ಬಾರ್, ಹಾಗೂ ಲೈನ್ ಕ್ಲಬ್ ಕರ್ನಿರೇ ಬಲಕುಂಜೆ ಕಾರ್ಯದರ್ಶಿ ಲಯನ್ ಸತೀಶ್ ಅವರು ಶುಭಕೋರಿದರು. ಶಾಲಾ ಮುಖ್ಯ ಶಿಕ್ಷಕರಾದ ಮೈಕಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿ ಆರ್ .ಪಿ ರೋಸ್ ಲೀನ್ ಲೋಬೋ ಹಾಗೂ ಸಂಪನ್ಮೂಲ ಶಿಕ್ಷಕರು ಲಯನ್ ಭಾಸ್ಕರ್ ಕಾಂಚನ್ ಕಾರ್ಯದರ್ಶಿ ಪ್ರತಿಬಾ ಹೆಬ್ಬಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಸ್ವಾಗತಿಸಿದರು. ಸಹ ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೂಲಿಯೆಟ್ ವಂದಿಸಿದರು