ಶಿಮಂತೂರು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್, ಲಿಯೋ ಕ್ಲಬ್ ಯೆನ್ ಇನ್ಸ್ ಫಯರ್ ವತಿಯಿಂದ ಶಿಮಂತೂರು ಶಾರದ ಸೆಂಟ್ರಲ್ ಸ್ಕೂಲ್ ತಂಬಾಕು ಮತ್ತು ಮಾದಕ ದ್ರವ್ಯ ವ್ಯಸನ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಶಿಬಿರ ಜರಗಿತು ಅಧ್ಯಕ್ಷತೆಯನ್ನು ಶಾರದ ಸೆಂಟ್ರಲ್ ಸ್ಕೂಲ್ ಶಿಮಂತುರು ಇದರ ಕೋಶಾಧಿಕಾರಿಯಾದ ಭುವನಾಭಿರಾಮ ಉಡುಪರು ವಹಿಸಿದರು. ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಅಧ್ಯಕ್ಷರಾದ ಬಿ ಶಿವಪ್ರಸಾದ್ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ
ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಕಾರ್ಯದರ್ಶಿ ಲಯನ್ ಪ್ರತಿಭಾ ಹೆಬ್ಬಾರ್, ನಿಕಟ ಪೂರ್ವ ಅಧ್ಯಕ್ಷರಾದ ಸುದೀರ್ ಎನ್ ಬಾಳಿಗ, ಉಪಾಧ್ಯಕ್ಷ ಪುಷ್ಪರಾಜ್ ಚೌಟ, ಶಾಲಾ ಸಂಚಾಲಕರಾದ ಶ್ರೀ ದೇವಿ ಪ್ರಸಾದ್ ಪುನರೂರು, ಶಾಲಾ ಶಿಕ್ಷಕರಕ್ಷಕ ಅಧ್ಯಕ್ಷರಾದ ಶ್ರೀಯುತ ಶಾಮ್ ಸುಂದರ್ ಶೆಟ್ಟಿ ಎ. ಬಿ ಶೆಟ್ಟಿ ದಂತ ವೈದ್ಯಕೀಯ ಆಸ್ಪತ್ರೆಯ,ಡಾ. ಶೋಭಿತ್ ಮುಂತಾದವರು ಉಪಸ್ಥಿತರಿದ್ದರು ತರುವಾಯ ಎಬಿ ಶೆಟ್ಟಿ ಆಸ್ಪತ್ರೆಯ ಪ್ರೊಫೆಸರ್ ಅದ ಡಾ ಶಿಲ್ಪ ರವರಿಂದ ತಂಬಾಕು ಹಾಗೂ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಹಿತಿ ಶಿಬಿರ ಜರಗಿತು.