ಮುಲ್ಕಿ: ಕ್ಯಾಥೋಲಿಕ್ ಸಭಾ ಮುಲ್ಕಿ ಘಟಕ,ಲಯನ್ಸ್ ಹಾಗೂ ಲಿಯೋ ಕ್ಲಬ್, ಸ್ತ್ರೀ ಸಂಘಟನೆ , ಐ.ಸಿ.ವೈ.ಯಂ ಘಟಕದ ಸಹಬಾಗಿತ್ವದಲ್ಲಿ “ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರು ವಂಚನೆಗೊಳಪಡುವ ಬಗ್ಗೆ ಹಾಗೂ ಸೖಬರ್ ಕ್ರೈಮ್ ಅಪರಾದಗಳ ಬಗ್ಗೆ ಮಾಹಿತಿ ಕಾರ್ಯಕ್ರಮಭಾನುವಾರ ಕಾರ್ನಾಡ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮುಲ್ಕಿ ಚರ್ಚ್ ಧರ್ಮ ಗುರುಗಳಾದ ಫಾ ಅಂತೋನಿ ಶೆರಾ ಉದ್ಘಾಟಿಸಿ ಮಾತನಾಡಿ ಯುವ ಜನಾಂಗ ದುಶ್ಚಟ, ಅಪರಾದಗಳಿಂದ ದೂರವಿದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು, ಇಂದಿನ ಮೊಬೈಲ್ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣ ಯುಗದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚುತ್ತಿದ್ದು ಎಚ್ಚರಿಕೆಯಿಂದ ಇರಿ ಎಂದು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಓಸ್ವಾಲ್ಡ್ ಕೊರೆಯಾ , ಸ್ತ್ರೀ ಸಂಘಟನೆಯ ಪ್ಲೇವಿ ಕೊರೆಯಾ, ಕ್ಯಾಥೋಲಿಕ್ ಸಭಾಧ್ಯಕ್ಷ ಗಾಡ್ವಿನ್ ಎಮಿಲ್ಡಾ, ರೆಬೆಲ್ಲೊ, ಐಸಿವೈಎಂ ಅಧ್ಯಕ್ಷ ವೇಲನ್ ಜೋಸ್ವಾ ಡಿ ಅಲ್ಮೇಡಾ,ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಕ್ವಾಲ್ಫಿ ರಾಲ್ಪಿ ಡಿಕೋಸ್ಟ, ನಿಕಟಪೂರ್ವ ಅಧ್ಯಕ್ಷೆ ಶೀತಲ್ ಸುಶೀಲ್,ಲ.ಸುಜಿತ್ ಸಾಲ್ಯಾನ್,ಲಿಯೋ ಅಧ್ಯಕ್ಷೆ ನಿಕಿತಾ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಲ್ಪಿ ಡಿಕೋಸ್ಟ ಸ್ವಾಗತಿಸಿದರು, ರೈಮಂಡ್ ರೆಬೆಲ್ಲೊ,ಶರಲ್ ಡಿಸೋಜಾ ನಿರೂಪಿಸಿದರು ಮೋನಿಕಾ ಕ್ರಾಸ್ತಾ ಧನ್ಯವಾದ ಅರ್ಪಿಸಿದರು. ಬಳಿಕ ಮುಲ್ಕಿ ಪೊಲೀಸ್ ಠಾಣಾ ಎಎಸ್ ಐ ಸಂಜೀವರವರು ಕಾನೂನು ಸಮರ್ಪಕ ಅನುಷ್ಠಾನಕ್ಕೆ ನಾಗರಿಕರ ಸಹಕಾರ, ಸೈಬರ್ ಕ್ರೈಂ ಬಗ್ಗೆ ಚಿರಾಗ್ ಸುವರ್ಣ, ಬ್ಯಾಂಕಿಂಗ್ ವ್ಯವಹಾರದಲ್ಲಿ ಗ್ರಾಹಕರು ವಂಚನೆಗೊಳಪಡುವ ಬಗ್ಗೆ ಸ್ವಾತಿ, ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಲಿಡಿಯ ಲೋಬೊ ಮಾಹಿತಿ ನೀಡಿದರು.