ಮುಲ್ಕಿ:ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ .2024, ದ.ಕ ,,ಶಿಕ್ಷಣ ಸಂಪನ್ಮೂಲಕೇಂದ್ರದ ಒಕ್ಕೂಟ, ದ.ಕ, ಪಡಿ ಮಂಗಳೂರು, ಕರ್ನಾಟಕ ಜ್ಞಾನ ವಿಜ್ಞಾನ.ಸಮಿತಿ ದ.ಕ , ಮುಲ್ಕಿ ಪೊಲೀಸ್ ರಾಣೆ ,ಪುನರೂರು ಅನುದಾನಿತ ಭಾರತ್ ಮಾತಾ ಹಿರಿಯ ಹಾಗೂ ಪ್ರೌಢ ಶಾಲೆ ನೇತೃತ್ವದಲ್ಲಿ
ಸ್ಯೆಬರ ಅಪರಾಧ ಹಾಗೂ ಮಕ್ಕಳ ರಕ್ಷಣೆ ಕಾನೂನು ಫೋಕ್ಸೋ ಬಗ್ಗೆ ಮಾಹಿತಿ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ ವಹಿಸಿದ್ದರು
ಸಂಪನ್ಮೂಲ ವ್ಯಕ್ತಿಯಾಗಿ.ಮುಲ್ಕಿ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಅನಿತಾ ಮಾತನಾಡಿ ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ಇರಲಿ, ಅಮಿಷಗಳಿಗೆ ಬಲಿಯಾಗಬೇಡಿ,ಭಾರತ ದೇಶದಲ್ಲಿ ಬಾಲಕಾರ್ಮಿಕರಿಗೆ ನಿಷೇಧವಿದ್ದು , ಉತ್ತಮ ಶಿಕ್ಷಣದ ಮೂಲಕ ಸಾಧಕರಾಗಿ ಎಂದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜೀ ಅಧ್ಯಕ್ಷೆ ಸುಗಂಧಿ,ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜೀ ಅಧ್ಯಕ್ಷೆ ಹಿಲ್ಡಾ ಡಿಸೋಜಾ, ಮಕ್ಕಳ ಹಕ್ಕು ಮಾಸೋತ್ಸವ ಸಮಿತಿಯ ಸಹ ಸಂಚಾಲಕಿ ನಂದಾ ಪಾಯಸ್, ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಪೋಷಕ ಸಮಿತಿಯ ಅಧ್ಯಕ್ಷರುಗಳಾದ ಸೀತಾರಾಮ ಶೆಟ್ಟಿ, ಕೃಷ್ಣಯ್ಯ ಆಚಾರ್ಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಘವೇಂದ್ರ ರಾವ್, ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಸಂದೀಪ್,
ಶಿಕ್ಷಕರಾದ ರೇಣುಕಾ, ಜ್ಯೋತಿ, ಲತಾ ಉಪಸ್ಥಿತರಿದ್ದರು.