Saturday, January 18, 2025
Homeರಾಜ್ಯಅಮಾನವೀಯ ಘಟನೆ: ಮೈಕೊರೆವ ಚಳಿಯಲ್ಲಿ ಹಸುಗೂಸು ಬಿಟ್ಟು ಹೋದ ಮಹಿಳೆ; ಮಗು ಸಾವು

ಅಮಾನವೀಯ ಘಟನೆ: ಮೈಕೊರೆವ ಚಳಿಯಲ್ಲಿ ಹಸುಗೂಸು ಬಿಟ್ಟು ಹೋದ ಮಹಿಳೆ; ಮಗು ಸಾವು

ಬೀದರ್: ಲ್ಲೆಯ ಭಾಲ್ಕಿ ತಾಲೂಕಿನ ರುದನೂರ್ ಗ್ರಾಮದಲ್ಲಿ ಮೈಕೊರೆವ ಚಳಿಯಲ್ಲಿ ಹಸುಗೂಸನ್ನು ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ.

ಗ್ರಾಮದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಮಸೀದಿ ಕಾಂಪೌಂಡ್ ಪಕ್ಕದಲ್ಲಿ ಬೆಳಗ್ಗೆ ಹಸುಗೂಸು ಕಂಡುಬಂದಿದ್ದು, ಗಂಡು ಮಗು ಎಂದು ತಿಳಿದು ಬಂದಿದೆ. ಅಲ್ಲಿಯೇ ಹತ್ತಿರದಲ್ಲಿದ್ದ ಸಿಸಿಟಿವಿಯಲ್ಲಿ ಮಗುವನ್ನು ಬಿಟ್ಟು ಹೋದ ದೃಶ್ಯಾವಳಿಗಳು ಸೆರೆಯಾಗಿದೆ. ದೃಶ್ಯದಲ್ಲಿ ಒಂದು ಚೀಲದಲ್ಲಿ ಮಗುವನ್ನು ತಂದಿದ್ದಾಳೆ. ಸುತ್ತಲೂ ಯಾರಾದರೂ ಇದ್ದಾರಾ ಎಂಬುವುದನ್ನು ಗಮನಿಸಿ. ಮಗುವನ್ನು ಕಾಂಪೌಂಡ್ ಪಕ್ಕದಲ್ಲಿ ಬಿಟ್ಟು ಹೋಗಿರುವುದು ಕಂಡುಬಂದಿದೆ.

ಬೆಳಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು ಜಮಾವಣೆಯಾಗಿ, ಹಸುಗೂಸನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದೆ. ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಹಸುಗೂಸು ಬಿಟ್ಟು ಹೋದ ಮಹಿಳೆಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

RELATED ARTICLES
- Advertisment -
Google search engine

Most Popular