Saturday, December 14, 2024
Homeಉಡುಪಿಒಳಕಾಡು ಉಡುಪಿ : ವಲಯ ಮಟ್ಟದ ಪ್ರತಿಭಾ ಕಾರಂಜಿ

ಒಳಕಾಡು ಉಡುಪಿ : ವಲಯ ಮಟ್ಟದ ಪ್ರತಿಭಾ ಕಾರಂಜಿ

ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಡುಪಿ , ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ , ಕ್ಷೇತ್ರ  ಸಂಪನ್ಮೂಲ ಕೇಂದ್ರ ಉಡುಪಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಳಕಾಡು ಉಡುಪಿ  ಇವರ ಸಂಯುಕ್ತ ಆಶ್ರಯದಲ್ಲಿ   ಉಡುಪಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವು . ನ .22 ರಂದು ಸರಕಾರಿ ಮಾ . ಹಿ . ಪ್ರಾಥ ಮಿಕ ಶಾಲೆ ಒಳ ಕಾಡು ಉಡುಪಿ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶಪಾಲ್ ಎ. ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು . ವಿವಿಧ ವೇಷ ಧರಿಸಿ ವಲಯಮಟ್ಟದ ಪ್ರತಿಭಾ ಕಾರಂಜಿ ಎಂಬ ನಮ ಪಾಲಕ ತೊಟ್ಟ ಪುಟಾಣಿಗಳನ್ನು ಸಿಂಗರಿಸಿದ ಸಿರಿಯೋಲೆಯನ್ನು ಬಿಡಿಸಿ ವೇದಿಕೆಗೆ ಕರೆತರುವ ಮೂಲಕ ಕಲೋತ್ಸವ  ಅನಾವರಣಗೊಳಿಸಿದರು.  ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ ಇದರ ಅಧ್ಯಕ್ಷರಾದ  ದಿನಕರ್ ಹೆರೂರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. 

ವೇದಿಕೆಯಲ್ಲಿ   ಮಾನ್ಯ ಉಪ ನಿರ್ದೇಕ್ಷರಾದ  ಗಣಪತಿ ಕೆ., ಶಾಲಾ ಶಿಕ್ಷಣ ಇಲಾಖೆಯ ಡಾ . ಎಲ್ಲಮ್ಮ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಶ್ರೀಮತಿ ಉಷಾ ಕಿರಣ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಕ ಸಂಘದ  ಪದಾಧಿಕಾರಿಗಳು, ಎಸ್. ಡಿ .ಎಮ್ . ಸಿ .  ಸದಸ್ಯರು, ಪ್ರಾಥಮಿಕ ಹಾಗು ಪ್ರೌಢ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರು, ಉಡುಪಿ ವಲಯದ ಎಲ್ಲ ಶಿಕ್ಷಣ ಸಂಯೋಜಕರು, ಹಾಗೂ  ಹಳೇ ವಿದ್ಯಾರ್ಥಿಗಳ ಸಂಘದ  ಅಧ್ಯಕ್ಷರು, ಸದಸ್ಯರು ಸಹಕರಿಸಿದರು,  ವಿವಿಧ ಶಾಲೆಗಳಿಂದ  ಆಗಮಿಸಿದ ವಿದ್ಯಾರ್ಥಿಗಳಿಗೆ ನಾನ ಬಗೆಯ ಸ್ಪರ್ಧೆ ಏರ್ಪಡಿಸಿ , ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನೆಡೆಯಿತು, ಪ್ರಾಥಮಿಕ ಮುಖ್ಯ ಶಿಕ್ಷಕರಾದ  ಶ್ರೀಮತಿ ಕುಸುಮ ಸ್ವಾಗತಿಸಿದರು. ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯನಿ ಪೂರ್ಣಿಮಾ ವಂದಿಸಿದರು. ಸಹ ಶಿಕ್ಷಕಿಯರಾದ ವಸಂತಿ , ಶಾಂತ, ಕಾರ್ಯಕ್ರಮ ನಿರೂಪಿಸಿದರು.   

RELATED ARTICLES
- Advertisment -
Google search engine

Most Popular