Thursday, November 7, 2024
Homeಪುತ್ತೂರುಚುನಾವಣೆ ವೇಳೆ ಕೋವಿ ಠಾಣೆಯಲ್ಲಿರಿಸುವ ನಿಯಮ ವಿರೋಧಿಸಿ ವಿನೂತನ ಅಭಿಯಾನ: ಪ್ರಾಣಿಗಳಿಂದ ಕೃಷಿ ರಕ್ಷಣೆಗೆ ರೈತರ...

ಚುನಾವಣೆ ವೇಳೆ ಕೋವಿ ಠಾಣೆಯಲ್ಲಿರಿಸುವ ನಿಯಮ ವಿರೋಧಿಸಿ ವಿನೂತನ ಅಭಿಯಾನ: ಪ್ರಾಣಿಗಳಿಂದ ಕೃಷಿ ರಕ್ಷಣೆಗೆ ರೈತರ ಪ್ಲಾನ್ ಏನು ಗೊತ್ತಾ?

ಪುತ್ತೂರು: ರೈತರಿಗೆ ತಮ್ಮ ಕೃಷಿ ರಕ್ಷಣೆಗೆ ನೀಡಲಾಗಿದ್ದ ಕೋವಿಗಳನ್ನು ಚುನಾವಣೆ ಬಂದಾಗ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವ ಕ್ರಮದ ವಿರುದ್ಧ ಇಲ್ಲಿನ ರೈತ ಸಂಘ, ಹಸಿರು ಸೇನೆ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಚುನಾವಣೆ ಬಂದಾಗ ಕೋವಿಗಳನ್ನು ಠಾಣೆಯಲ್ಲಿ ಠೇವಣಿ ಇಡುವ ಕ್ರಮ ಅಸಮರ್ಥನೀಯವಾಗಿದ್ದು, ತೋಟಗಳಿಗೆ ಪ್ರಾಣಿಗಳಿಂದ ತೊಂದರೆಯಾದರೆ ತುರ್ತು ಸೇವೆ 112 ಸಂಖ್ಯೆಗೆ ಕರೆ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ‘ಕೋವಿ ಠೇವಣಿ ಇಡುತ್ತೇವೆ, ತೋಟ ರಕ್ಷಣೆಗೆ ಪೊಲೀಸರನ್ನು ನೇಮಕ ಮಾಡಿ’ ಎಂಬ ಘೋಷಣೆಯೊಂದಿಗೆ ಈ ಅಭಿಯಾನ ಕೈಗೊಳ್ಳಲಾಗಿದೆ. ಪ್ರತಿ ಚುನಾವಣೆಯ ವೇಳೆ ರೈತರ ಕೋವಿಗಳನ್ನು ಠಾಣೆಗೆ ಒಪ್ಪಿಸಬೇಕು. ಚುನಾವಣೆ ಮುಗಿದು ಮೂರು ತಿಂಗಳ ಬಳಿಕ ಅವು ವಾಪಾಸ್ ಸಿಗುತ್ತವೆ. ಇಂತಹ ಸಂದರ್ಭಗಳಲ್ಲಿ ಕೋವಿಗಳಿಗೆ ಹಾನಿಯೂ ಆಗಿರುತ್ತದೆ. ರೈತರ ಕೋವಿಯಿಂದ ಚುನಾವಣೆ ಸಂದರ್ಭ ಹಾನಿಗಳಾದ ಇತಿಹಾಸವಿಲ್ಲ. ಆದರೂ ರೈತರನ್ನು ಕ್ರಿಮಿನಲ್ ಗಳಂತೆ ನೋಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಪ್ರಮುಖರಾದ ಶಿವಣ್ಣಗೌಡ ಇಡ್ಯಾಡಿ, ಹೊನ್ನಪ್ಪ ಗೌಡ, ಪ್ರವೀಣ ಕುಮಾರ್ ಕಡೆಂಜಿ ಹಾಗೂ ಶಿವಚಂದ್ರ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular