ಉಪ್ಪಿನಂಗಡಿ : ಇಳಂತಿಳ ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ಪ್ರಸಿದ್ದ ಇನ್ಸಪ್ಯೆರ್ ಕೋಚಿಂಗ್ ಸೆಂಟರ್ ನ ಶಾಖೆ ಪ್ರಾರಂಭಗೊಂಡಿತು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ತಿಕಾರ್ ಅವರು ಮಕ್ಕಳ ಕಲಿಕಾಅಬಿವೃದ್ದಿ ಮತ್ತು ಕೌಶಲ್ಯ ವನ್ನು ವರ್ದಿಸಲು ಇನ್ಸಪ್ಯರ್ ಕೊಚಿಂಗ್ ಸಹಕರಿಸುತ್ತದೆ ಎಂದರು. ಎಸ್ ಎಸ್‌ಎಲ್ ಸಿ ಮತ್ತು ಪಿಯುಸಿ ಅನುತ್ತೀರ್ಣ ಮತ್ತು ಕಲಿಕೆಯಲ್ಲಿ ಹಿಂದುಳಿದ ಎಲ್ಲಾ ಸಮುದಾಯದಮಕ್ಕಳಿಗೆ ಇದು ಒಂದು ಉತ್ತಮ ಅವಕಾಶ ಎಂದು ಉಪ್ಪಿನಂಗಡಿ ಸಂಸ್ಥೆಯ ಮುಖ್ಯ ಸ್ಥರಾದ ಇಬ್ರಾಹಿಂ ಖಲೀಲ್ ಹೇಂತಾರ್ ಹೇಳಿದರು ಮತ್ತು ನೌರತುಲ್ ಮದೀನಾ ಶಾಲೆಯ ಸಲಹೆಗಾರರು ಹಾಗೂ ನಿವೃತ್ತ ಶಿಕ್ಷಕ ರಾದ ಫಕ್ರುದ್ದೀನ್ ಮಾಸ್ಟರ್ ಮಾತನಾಡಿ ಸಂಸ್ಥೆಯ ಯಶಸ್ಸಿಗೆ ಎಲ್ಲಾರಿಗೂ ಶುಭಹಾರೈಸಿದರು. ಮತ್ತು ಜ್ಞಾನ ಭಾರತಿಶಾಲೆಯ ಸಂಚಾಲಕರಾದ ಅಬ್ದುಲ್ ರವೂಫ್ ಯುಟಿ ಮಾತನಾಡಿ ವಿದ್ಯಾರ್ಥಿಗಳು ಈ ಒಂದು ಸ್ವರ್ಣ ಅವಕಾಶವನ್ನು ಸದುಪಯೋಗ ಪಡಿಸಿ ಉತ್ತಮ ಫಲಿತಾಂಶ ವನ್ನು ಎಲ್ಲಾ ಪರೀಕ್ಷೆ ಯಲ್ಲಿ ನೀಡಬೇಕೆಂದರು ಅದೇ ರೀತಿಯಲ್ಲಿ ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷರಾದ ಇಕ್ಬಾಲ್ ಜೊಗಿಬೆಟ್ಟು ಮಾತನಾಡಿ ಕೋಚಿಂಗ್ ನ ಮಹತ್ವ ವನ್ನು ವಿವರಿಸಿದರು ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೋಷಕ ರು ಭಾಗವಹಿಸಿದರು.
ಈಗಾಗಲೇ ಕೊಡಗು ಮತ್ತು ಮಂಗಳೂರು ಶಾಖೆಗಳಿದ್ದು ಹಲವು ವರ್ಷಗಳಿಂದ ಉತ್ತಮ ಪಳಿತಾಂಶವನ್ನು ಈ ಸಂಸ್ಥೆಯು ನೀಡುತ್ತಿದೆ.ಹೂವಿನ ಗಿಡಕ್ಕೆ ನೀರು ಹಾಕುವ ಮೂಲಕ ಶುಭಾರಂಭ ಮಾಡಲಾಯಿತು.