Wednesday, September 11, 2024
Homeಕಿನ್ನಿಗೋಳಿಅಂತರ್ ಶಾಲಾ ಜಿಲ್ಲಾ ಮಟ್ಟದಲ್ಲಿ ನೃತ್ಯ ಸ್ಪರ್ಧೆ: ಕಿನ್ನಿಗೋಳಿ ಸೈಂಟ್ ಮೇರಿಸ್ ಸ್ಕೂಲ್‌ ಪ್ರಥಮ...

ಅಂತರ್ ಶಾಲಾ ಜಿಲ್ಲಾ ಮಟ್ಟದಲ್ಲಿ ನೃತ್ಯ ಸ್ಪರ್ಧೆ: ಕಿನ್ನಿಗೋಳಿ ಸೈಂಟ್ ಮೇರಿಸ್ ಸ್ಕೂಲ್‌ ಪ್ರಥಮ ಸ್ಥಾನ

ಮಂಗಳೂರು : ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ತಂಡವು ಐಕ್ಸ್ ಅಂತರ್ ಶಾಲಾ ಜಿಲ್ಲಾ ಮಟ್ಟದಲ್ಲಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಆಗಸ್ಟ್ 21ರಂದು ಉಜಿರೆಯ ಎಸ್. ಡಿ. ಎಮ್.ಆಂಗ್ಲ ಮಾಧ್ಯಮ ( ಸಿ.ಬಿ. ಎಸ್. ಇ) ಶಾಲೆಯಲ್ಲಿ ನಡೆದ ದ.ಕ ಜಿಲ್ಲೆಯ ಸಿ.ಬಿ.ಎಸ್. ಇ ಅಂತರ ಶಾಲೆಗಳ ಐಕ್ಸ್ (Association of ICSE and CBSE schools – AICS) ಸಾಂಸ್ಕೃತಿಕ ಸ್ಪರ್ಧೆ ಆನ್ವೀಕ್ಷ್ಯ0 – 2024 ಇದರಲ್ಲಿ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ತಂಡವು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಗೆದ್ದುಕೊಂಡಿದೆ ಹಾಗೂ ಚಾಂಪಿಯನ್ ಶಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಿಲ್ಲೆಯ ಒಟ್ಟು 33 ತಂಡಗಳು ಭಾಗವಹಿಸಿದ್ದವು.
ತರಬೇತುದಾರ ಶಿಕ್ಷಕರಿಗೆ ಹಾಗೂ ವಿಜೇತ ತಂಡಕ್ಕೆ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಸಂಚಾಲಕರು,ಪ್ರಾಂಶುಪಾಲರು,ಆಡಳಿತ ಮಂಡಳಿ,ಶಿಕ್ಷಕ – ರಕ್ಶಕ ಸಂಘ ಅಭಿನಂದನೆಗಳನ್ನು ಸಲ್ಲಿಸಿದರು

RELATED ARTICLES
- Advertisment -
Google search engine

Most Popular