Tuesday, April 22, 2025
Homeದಾವಣಗೆರೆಅಂತಾರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ- ಏಪ್ರಿಲ್ 2025

ಅಂತಾರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ- ಏಪ್ರಿಲ್ 2025

ದಾವಣಗೆರೆ : ಕಸ್ತೂರಿ ಸಿರಿಗನ್ನಡ ವೇದಿಕೆ(ರಿ), ಬೆಳಗಾವಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಂತಾರಾಷ್ಟ್ರೀಯ ಮಟ್ಟದ ಅಂತರ್ಜಾಲ ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದು, ಕವಿಗೋಷ್ಠಿಯ ಜೊತೆಗೆ ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ಚಿತ್ರಕಲೆ, ನೃತ್ಯ, ವಿಜ್ಞಾನ, ಸಮಾಜ ಸೇವೆ, ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಸ್ತುತ ಸೇವೆಸಲ್ಲಿಸುತ್ತಿರುವ ಪ್ರತಿಭಾನ್ವಿತ ಬಾಲ, ಯುವ, ಹಿರಿಯ ಪ್ರತಿಭೆಗಳಿಗೆ ಗೌರವಪೂರ್ವಕವಾಗಿ ವಿವಿಧ ಪ್ರಶಸ್ತಿ / ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುವುದು. ಆಸಕ್ತ ಪ್ರತಿಭಾನ್ವಿತ ಸಾಧಕ ಮಿತ್ರರು ಸ್ವ- ವಿವರವುಳ್ಳ ಪಿಡಿಎಫ್ ಅನ್ನು ವೇದಿಕೆಯ ಅಧ್ಯಕ್ಷರ ವಾಟ್ಸಪ್ 9743867298 ನಂಬರಿಗೆ ದಿನಾಂಕ 15 ಏಪ್ರಿಲ್ 2025 ರ ಒಳಗೆ ಕಳುಹಿಸಿ ಅರ್ಜಿಯನ್ನು ಸಲ್ಲಿಸಬಹುದು ಎಂದು ವೇದಿಕೆಯ ಗೌರವ ಸಲಹೆಗಾರ ಶ್ರೀ ಸಾಲಿಗ್ರಾಮ ಗಣೇಶ್ ಶೆಣೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular