ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಸಂದರ್ಶನ ಪ್ರಸಾರವಾಗಲಿದೆ.
ಕಾರ್ಕಳ ಜರಿಗುಡ್ಡೆಯಲ್ಲಿ ಸುರಕ್ಷಾ ಸೇವಾಶ್ರಮದ ಸ್ಥಾಪಕರಾದ ಆಯೀಷಾ ಭಾಗವಹಿಸಲಿದ್ದಾರೆ.
ಇದು ಮಾರ್ಚ್ 8 ಶನಿವಾರ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ ಮತ್ತು ಮಾರ್ಚ್ 9 ರಂದು ಮಧ್ಯಾಹ್ನ 1ಗಂಟೆಗೆ ಮರುಪ್ರಸಾರವಾಗಲಿದೆ.
ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.