ಮಂಗಳೂರು : ಟಾಟಾ ಮೋಟರ್ಸ್ ಮಂಗಳೂರಿನಲ್ಲಿ ಒಂದು ವಿಶಿಷ್ಟವಾದ ಗ್ರಾಹಕ ತೊಡಗಿಕೊಳ್ಳುವಿಕೆ ಉಪಕ್ರಮ ದೇಶ್ ಕಾ ಟ್ರಕ್ ಉತ್ಸವ್ 2.0 ಅನ್ನು ಇತ್ತೀಚೆಗೆ ಅಂತ್ಯಗೊಳಿಸಿತು.
2023ರಲ್ಲಿ ನಡೆದ ಆರಂಭಿಕ ಆವೃತ್ತಿಯ ಅಮೋಘ ಯಶಸ್ಸನ್ನು ಅನುಸರಿಸಿ, ಈ ವರ್ಷದ ಕಾರ್ಯಕ್ರಮವು ಟಾಟಾ ಮೋಟರ್ಸ್ ಅವರ ಇಂಟರ್ ಮೀಡಿಯೇಟ್, ಲೈಟ್, ಅಂಡ್ ಮೀಡಿಯಮ್ ಕಮರ್ಶಿಯಲ್ ವೆಹಿಕಲ್ಸ್ (ILMCV) ಶ್ರೇಣಿಯ ಅತ್ಯುತ್ಕೃಷ್ಟ ಇಂಧನ-ಸಮರ್ಥ ಸಂಚಾರ ಪರಿಹಾರಗಳನ್ನು ಮಂಗಳೂರಿನ ಟ್ರಕ್ ಸಮುದಾಯಕ್ಕೆ ಪರಿಚಯಿಸಿತು.
ಲಾಜಿಸ್ಟಿಕ್ಸ್ ಕ್ಷೇತ್ರದಿಂದ ಬಂದಿದ್ದ ಸಂದರ್ಶಕರು, ಇತ್ತೀಚಿನ ಉತ್ಪನ್ನ ಆವಿಷ್ಕಾರಗಳು ಹಾಗೂ ಮೌಲ್ಯ-ವರ್ಧಿತ ಸೇವೆಗಳ ಸುದೀರ್ಘ ಪ್ರದರ್ಶನಗಳನ್ನು ಅನುಭವಿಸಿದರು. ಪ್ರಸ್ತುತ ಏರ್ಪಡುತ್ತಿರುವ ವಾಹನ ಪ್ರಯೋಗಗಳ ಪೆÇ್ರೀತ್ಸಾಹವನ್ನು ಕೂಡ ಎತ್ತಿತೋರಿಸಿದ ಕಾರ್ಯಕ್ರಮವು ಅವರಿಗೆ BS6 ಹಂತ II ಶ್ರೇಣಿಯ ಇಂಧನ ಸಾಮಥ್ರ್ಯ ಮತ್ತು ಲಾಭದಾಯಕತೆಯ ಪ್ರಯೋಜನಗಳ ಅಮೂಲ್ಯ ಮಾಹಿತಿ ಒದಗಿಸಿತು. ಇಷ್ಟೇ ಅಲ್ಲದೆ ಸಂಸ್ಥೆಯು, ಹಲವಾರು ಪ್ರಮುಖ ಗ್ರಾಹಕರ ಸಹಭಾಗಿತ್ವ ಮತ್ತು ಬೆಂಬಲವನ್ನೂ ಗೌರವಿಸಿ ಒಟ್ಟಾರೆ ಅನುಭವವು ಇನ್ನೂ ಹೆಚ್ಚು ಫಲಪ್ರದವಾಗಿರುವಂತೆ ಮಾಡಿತು.
ಪ್ರಸಾದ ಮೋಟಾರ್ಸ್ ಮಾಲೀಕರಾದ ರವಿ ಆನಂದ ಜಲನಿ, ಟಾಟಾ ಟ್ರಕಗಳ ಸಾಮಾನ್ಯ ಗ್ರಾಹಕನಾಗಿ ಮಂಗಳೂರಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಕ್ಕೆ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ. ನನ್ನ ವ್ಯಾಪಾರವನ್ನು ಇನ್ನಷ್ಟು ಲಾಭದಾಯಕವನ್ನಾಗಿ ಮಾಡಲು ಇಂಧನ-ಸಮರ್ಥ ಉತ್ಪನ್ನಗಳು ಹಾಗೂ ಮೌಲ್ಯ-ವರ್ಧಿತ ಅಂಶಗಳ ಕುರಿತು ನಾನು ಕಲಿತುಕೊಂಡೆ ಎಂದು ಹೇಳಿದರು.
ಗೋಕರ್ಣನಾಥೇಶ್ವರ ಸಾರಿಗೆ ಸಂಸ್ಥೆಯ ಮಾಲೀಕರಾದ ರೋಹಿತ್ ಕುಮಾರ್, ಟ್ರಕ್ ಉತ್ಸವ್ 2.0ಗೆ ಬಂದಿದ್ದು ನಿಜವಾಗಿಯೂ ಅತ್ಯಂತ ಮಾಹಿತಿಯುಳ್ಳ ಅನುಭವ ಪಡೆದುಕೊಂಡಂತಾಯಿತು. ಟಾಟಾ ಮೋಟರ್ಸ್ ಅವರ ಇತ್ತೀಚಿನ ಆವಿಷ್ಕಾರಗಳು ಹಾಗೂ ಅವರ ಟ್ರಕ್ಗಳ ಅತ್ಯುತ್ಕೃಷ್ಟ ಇಂಧನ ಸಾಮಥ್ರ್ಯ ನನಗೆ ಬಹಳ ಮೆಚ್ಚುಗೆಯಾಗಿದೆ. ಟಾಟಾ ಮೋಟರ್ಸ್ ಅವರ ಹೊಸ ಶ್ರೇಣಿಯ ಟ್ರಕಗಳೊಂದಿಗೆ ನನ್ನ ವ್ಯಾಪಾರವನ್ನು ವಿಸ್ತರಿಸಲು ನನಗೆ ಈಗ ಆತ್ಮವಿಶ್ವಾಸ ಮತ್ತು ಬಲ ಎರಡೂ ಹೆಚ್ಚಿದಂತೆ ಭಾಸವಾಗುತ್ತಿದೆ ಎಂದು ಹೇಳಿದರು.