Monday, December 2, 2024
HomeUncategorizedಅಂಧರಿಗೆ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ನ ಹೊಸ ಕನ್ನಡಕಗಳ ಆವಿಷ್ಕಾರ:- ಪ್ರೊ.ಎಸ್.ಎಸ್.ಐಯ್ಯಂಗಾರ್

ಅಂಧರಿಗೆ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ನ ಹೊಸ ಕನ್ನಡಕಗಳ ಆವಿಷ್ಕಾರ:- ಪ್ರೊ.ಎಸ್.ಎಸ್.ಐಯ್ಯಂಗಾರ್

ಬೆಂಗಳೂರು:ಆಚಾರ್ಯ ಪಾಠಶಾಲಾ ಇಂಜಿನೀಯರಿಂಗ್‌ ಕಾಲೇಜಿನ ಪ್ರಥಮ ವರ್ಷ ಬಿ.ಇ ತರಗತಿಗಳ ಉದ್ಘಾಟನಾ ಸಮಾರಂಭವನ್ನು ಪ್ರಪಂಚದ ಪ್ರಸಿದ್ಧ ವಿಜ್ಞಾನಿ ಹಾಗೂ ಅಮೆರಿಕಾದ ಪ್ಲೊರಿಡಾ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರೊ.ಎಸ್.ಎಸ್.ಐಯ್ಯಂಗಾರ್‌ ಹಾಗೂ ಇಂಡಿಯನ್‌ ಇನ್ಸ್ಟಿಟ್ಯೂಟ್ ‌ ಆಫ್‌ ಸೈನ್ಸ್‌ನ ಪ್ರೊ.ಕೆ.ಜೆ.ರಾವ್‌ ಉದ್ಘಾಟಿಸಿದರು.
ಪ್ರೊ.ಎಸ್.ಎಸ್.ಐಯ್ಯಂಗಾರ್ ಮಾತನಾಡಿ, ಪ್ರಪಂಚದ ಅಂಧರಿಗೊಂದು ಬೆಳಕಾಗುವ ಸಾಧನವೊಂದನ್ನು ತಾವು ಸಂಶೋಧಿಸಿದ್ದು, ಈ ಕನ್ನಡಕದ ಮೂಲಕ ಅಂಧರೂ ಸಹ ದೃಷ್ಠಿಯನ್ನು ಪಡೆಯಬಹುದು. ಈ ಸಂಶೋಧನೆಯು ಇದೆ ಡಿಸೆಂಬರ್‌ 9 ರಂದು ಲೋಕಾರ್ಪಣೆಗೊಳ್ಳಲಿದೆ. ಎಪಿಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಅತಿ ಹೆಚ್ಚು ಅಂಧರು ಅಧ್ಯಯನ ಮಾಡುತ್ತಿರುವುದು ಬಹಳ ಹೆಮ್ಮೆಯ ಹಾಗೂ ಸಂತಸದ ವಿಷಯವಾಗಿದೆ. ಈ ಕನ್ನಡಕಗಳು ಲೋಕಾರ್ಪಣೆಗೊಂಡನಂತರ ಸಂಸ್ಥೆಯ ಎಲ್ಲಾ ಅಂಧ ವಿದ್ಯಾರ್ಥಿಗಳಿಗೆ ಈ ಕನ್ನಡಕಗಳನ್ನು ನೀಡುತ್ತೇವೆ ಎಂದು ತಿಳಿಸಿದರು.
ಪ್ರೊ.ಕೆ.ಜೆ.ರಾವ್‌, ಮಾತನಾಡಿ, ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು, ಹೆಚ್ಚು ಕ್ರಿಯಾಶೀಲರಾಗಬೇಕು, ಸಮಾಜದ ಉತ್ತಮ ನಾಗರೀಕರಾಗಿ, ತಂದೆ-ತಾಯಿಯನ್ನು ಗೌರವಿಸಿ ಹಾಗೂ ಜೀವನದಲ್ಲಿ ಶ್ರದ್ಧೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು .ಹಾಗೂ ಇದೆ ಸಂದರ್ಭದಲ್ಲಿ ಡಾ.ಸಿ.ವಿ.ಹರೀಶ್‌, ಸಂಶೋಧಕರು, ಕಾಗ್ನೆಟಿವ್‌ ಸೈನ್ಸ್‌ರವರು ಗೌರವ ಸಮರ್ಪಣೆಗೆ ಭಾಜನರಾದರು.
ಎಪಿಎಸ್‌ ವಿಶ್ವಸ್ಥಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ.ಎ.ಪ್ರಕಾಶ್‌ರವರು ಎಪಿಎಸ್‌ ಸಂಸ್ಥೆಯಲ್ಲಿ ಹೊಸ ಅವಿಷ್ಕಾರ, ಸಂಶೋಧನೆಗಳಿಗೆ ಸದಾಕಾಲ ಪ್ರೋತ್ಸಾಹ ವಿರುತ್ತದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಸಿಎ.ಡಾ.ವಿಷ್ಣುಭರತ್‌ ಅಲಂಪಲ್ಲಿರ ಮಾತನಾಡಿ, ಡಾ.ಎಸ್.ಎಸ್.ಐಯ್ಯಂಗಾರ್‌, ಪ್ರೊ.ಕೆ.ಜೆ.ರಾವ್‌ ಅಂತಹವರು ತಮಗೆ ಮಾದರಿಯಾಗಬೇಕು, ಕಚ್ಛಾವಜ್ರವಾಗಿ ದೊರೆತ ನಿಮ್ಮನ್ನು ಎಪಿಎಸ್‌ ಸಂಸ್ಥೆಯು ಕೋಹಿನೂರು ವಜ್ರವನ್ನಾಗಿ ಮಾರ್ಪಡಿಸುತ್ತದೆ. ಹಾಗಾಗಿ ಶ್ರಮವಹಿಸಿ ಅಧ್ಯಯನ ನಡೆಸಿ, ಸಂಸ್ಥೆಯು ಅತ್ಯಮೂಲ್ಯವಾದ 3ಡಿ ಲ್ಯಾಬ್‌, ರೊಬೋಟಿಕ್‌ ಲ್ಯಾಬ್‌, ನಂತಹ ಕೋರ್ಸ್‌ಗಳನ್ನು ನೀಡಿದೆ. ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರೊ.ಎಸ್.ಸಿ.ಶರ್ಮಾರವರು, ಉಪಧ್ಯಾಕ್ಷರು ಎಪಿಎಸ್‌ ಶಿಕ್ಷಣ ಸಂಸ್ಥೆ ಹಾಗೂ ಎಪಿಎಸ್‌ ಇಂಜಿನಿಯರಿಂಗ್‌ ಕಾಲೇಜಿನ ಗೌರನ್ನಿಂಗ್‌ ಕೌನ್ಸಿಲ್‌ ಛೇರ್ಮನ್‌ ರವರು ನೇರವೇರಿಸಿದರು, ಎಪಿಎಸ್‌ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಮೀರಣ ರವರು ಎಲ್ಲರನ್ನು ವಂದಿಸಿದರು ಹಾಗೂ ಎಪಿಎಸ್‌ ವಿಶ್ವಸ್ಥಮಂಡಳಿಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನರ್ಮದ ಘಟಕದ ವಿಶೇಷಚೇತನ ವಿದ್ಯಾರ್ಥಿಗಳು ಹಾಜರಿದ್ದದ್ದು ವಿಶೇಷವಾಗಿತ್ತು.

RELATED ARTICLES
- Advertisment -
Google search engine

Most Popular