ಬೆಂಗಳೂರು: ವಿಶ್ವಾಸಾರ್ಹ ಆರೋಗ್ಯ ಸೇವೆ ಒದಗಿಸುವ ಪೀಪಲ್ ಟ್ರೀ ಆಸ್ಪತ್ರೆ, ಬ್ಲ್ಯಾಕ್‌ರಾಕ್‌ನಿಂದ 430 ಕೋಟಿ ರೂ ಹೂಡಿಕೆ ಪಡೆದುಕೊಂಡಿದೆ. ಈ ಮೂಲಕ ತನ್ನ ಸಾಮರ್ಥ್ಯವನ್ನು 400 ಹಾಸಿಗೆಗಳಿಗೆ ವಿಸ್ತರಿಸಿಕೊಂಡು ಆಂಕೊಲಾಜಿ ಆರೈಕೆ ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸಿಕೊಂಡಿದೆ.
ಮೊದಲ ಹಂತದಲ್ಲಿ 220 ಕೋಟಿ ರೂ ಒದಗಿಸುತ್ತಿದ್ದು, ಖರೀದಿ ಮತ್ತು ಆರಂಭಿಕ ಹಂತದ ವಿಸ್ತರಣಾ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ. ಎರಡನೇ ಹಂತದಲ್ಲಿ 210 ಕೋಟಿ ರೂ ಮೊತ್ತದಲ್ಲಿ ಮುಂದುವರೆದ ಕಾರ್ಯಾಚರಣೆಗಳಿಗೆ ವಿನಿಯೋಗಿಸಲಾಗುವುದು ಎಂದು ಹೇಳಿದೆ.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಡಾ. ಜೋತಿ ನೀರಜಾ ಮತ್ತು ನಿರ್ದೇಶಕರಾದ ಡಾ. ಉಪೇಂದ್ರ ಕುಮಾರ್ ಕಂಡ್ಲೂರಿ ಸ್ಥಾಪಿಸಿದ ಪೀಪಲ್ ಟ್ರೀ ಆಸ್ಪತ್ರೆ ಸ್ಥಿರತೆಯನ್ನು ಸ್ಥಾಪಿಸಿದೆ. ಆಸ್ಪತ್ರೆಯು 2-3 ವರ್ಷಗಳಲ್ಲಿ ಬೆಂಗಳೂರಿನಾದ್ಯಂತ ತನ್ನ ಹಾಸಿಗೆ ಸಾಮರ್ಥ್ಯವನ್ನು 300 ರಿಂದ 800 ಕ್ಕೆ ವಿಸ್ತರಿಸಲು ಯೋಜಿಸಿದೆ.
ಈ ಹೂಡಿಕೆಯಿಂದ ಗರಿಷ್ಠ ಒಂದು ಸಾವಿರ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. 12 ವರ್ಷಗಳ ಪರಂಪರೆಯೊಂದಿಗೆ, ಪೀಪಲ್ ಟ್ರೀ ಆಸ್ಪತ್ರೆ ಉತ್ತಮ ಗುಣಮಟ್ಟದ, ರೋಗಿ-ಕೇಂದ್ರಿತ ಆರೈಕೆಗೆ ಸಮಾನಾರ್ಥಕವಾಗಿದೆ. ಆಸ್ಪತ್ರೆಯ ತಂಡವು 200 ವರ್ಷಗಳ ಸಂಯೋಜಿತ ಅನುಭವ ಹೊಂದಿರುವ 100 ಹೆಚ್ಚು ನುರಿತ ವೈದ್ಯರನ್ನು ಒಳಗೊಂಡಿದೆ. ಒಟ್ಟು ಹೆಚ್ಚುವರಿಯಾಗಿ 3 ಲಕ್ಷ ಚದರ ಅಡಿ ವಿಸ್ತರಣೆಗೆ ನೀಲ ನಕ್ಷೆ ಸಿದ್ಧಪಡಿಸಲಾಗುತ್ತಿದೆ.