ದಾವಣಗೆರೆ : ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ 2023ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕ.ಸಾ.ಪ.ದಿಂದ ವಿವಿಧ ದತ್ತಿನಿಧಿ ರಾಜ್ಯ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಕಳಿಸಲು ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ. ದತ್ತಿನಿಧಿ ಪ್ರಶಸ್ತಿಗೆ ಕ.ಸಾ.ಪ. ಸದಸ್ಯರಾದವರಿಗೆ ಮಾತ್ರ ಅವಕಾಶ. ಸದಸ್ಯರಾಗದವರು ಆಜೀವ ಸದಸ್ಯತ್ವ ಪಡೆದು ಮೂರು ಪುಸ್ತಕಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸುವುದು ಹೆಚ್ಚಿನ ಮಾಹಿತಿಗೆ ಪರಿಷತ್ತಿನ ಅಂತಜಾಲತಾಣ www.kasapa.in ಈ ದೂರವಾಣಿ ಸಂಖ್ಯೆ 080- 26612991/26623584/22423867/26672992 ಸಂಪರ್ಕಿಸಬಹುದು
ಎಂದು ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಾಮಾನ್ಯ ಸದಸ್ಯರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ. ದತ್ತಿನಿಧಿ ಪ್ರಶಸ್ತಿಗೆ ಪುಸ್ತಕಗಳನ್ನು ಕಳಿಸುವ ವಿಳಾಸ ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-560018.