ಬಂಟ್ವಾಳ: ದಿನಾಂಕ 18-01-2025 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಟಿಕ ಇಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಘಟಕ ದ ವತಿಯಿಂದ ಅನಾವರಣ ವಿಶೇಷ ಸ್ಪರ್ಧಾ ಕಾರ್ಯಕ್ರಮವು ನಡೆಯಿತು.
ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಚೇತನಾ ಕುಮಾರಿ ದೀಪ ಪ್ರಜ್ವಲನ ಮಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಗೌರವಾನ್ವಿತ ದಿವಾಕರ ಶೆಟ್ಟಿ ಕಂಟಿಕ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವ, ಹರಿಣಾಕ್ಷಿ
ಆನಂದಶೆಟ್ಟಿ,
ಎಸ್. ಡಿ ಎಂ ಸಿ ಅಧ್ಯಕ್ಷರಾದ ರಾಜೇಶ್,ಮತ್ತು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಸಂಸ್ಥಾಪಕರಾದ ವಿಜಯ್ ಕುಮಾರ್ ಜೈನ್ ಪ್ರಸ್ತಾವನೆ ಮಾಡಿ ಹಾರೈಸಿದರು. ಬಂಟ್ವಾಳ ಘಟಕದ ಅಧ್ಯಕ್ಷರಾದ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಕೋಶಾಧಿಕಾರಿಯಾದ ರಾಕೇಶ್ ಪೊಳಲಿ, ಸಾಂಸ್ಕೃತಿಕ ಕಾರ್ಯದರ್ಶಿಯಾದ ಸುಚಿತ್ರ ಭಟ್
ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಬಹುಮಾನವನ್ನು ನೀಡಲಾಯಿತು.
ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಣೆ ಮಾಡಲಾಗಿ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.