ಮಡಿಕೇರಿ :ದಿನಾಂಕ 23.3.2025.ಭಾನುವಾರ ಮದ್ಯಾಹ್ನ 2ಗಂಟೆಗೆ ಮಡಿಕೇರಿಯ ಪತ್ರಿಕಾ ಭವನ ವೇದಿಕೆಯಲ್ಲಿ ನಡೆಯಲಿರುವ, ಶ್ರೀ ಬೊಳ್ಳಜಿರ ಬಿ. ಅಯ್ಯಪ್ಪ ಅಧ್ಯಕ್ಷರಾಗಿರುವ ಕೊಡಗು ಕನ್ನಡ ಭವನ ಜಿಲ್ಲಾ ಘಟಕ ಹಾಗೂ ರುಬೀನ ಎಂ ಎ. ಸೋಮವಾರಪೇಟೆ ಅಧ್ಯಕ್ಷೆ ಯಾಗಿರುವ “ಕನ್ನಡ ಚುಟುಕು ಸಾಹಿತ್ಯ ಪರಿಷತ್ “ಕೊಡಗು ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮ ದಲ್ಲಿ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ, ಗೌರವಅರ್ಪಣೆ ಜೊತೆಗೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದೆ. ಆದುದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನುರಿತ ಹಾಗೂ ನವಾಗತ ಕವಿಗಳಿಗೆ ಕವಿಗೋಷ್ಠಿ ಏರ್ಪಡಿಸುತ್ತಿದ್ದೇವೆ. ಭಾಗವಹಿಸಲು ಇಚ್ಚಿಸುವ, ಕವಿ, ಕವಯತ್ರಿ ಯರು ತಮ್ಮ ಹೆಸರನ್ನು ರುಬೀನ ಎಂ ಎ,9071194087.ಯಾ ನಿವ್ಯಾ ಕಾವೇರಮ್ಮ 9449505092,ಈ ವಾಟ್ಸಪ್ ನಂಬರ್ ಗಳಲ್ಲಿ ದಿನಾಂಕ 12.3.2025ರ ಒಳಗಾಗಿ ತಮ್ಮ ಹೆಸರು ವಿಳಾಸ ತಾಲೂಕು ಸಹಿತ ವಿವರಗಳನ್ನು “ನಾನು 23ರ ಕವಿಗೋಷ್ಠಿ ಯಲ್ಲಿ ಭಾಗವಹಿಸುತ್ತೇನೆ, ಎಂದು ಕೂಡಲೇ ಸಮಾರ್ಕಿಸಿ, ಮೊದಲಾಗಿ ಹೆಸರು ಕೊಡುವ 30ಮಂದಿಗೆ ಅವಕಾಶವಿರುತ್ತದೆ. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿ ಕವಯತ್ರಿ ಗಳಿಗೆ ಕನ್ನಡ ಶಾಲು,ಪ್ರಮಾಣಪತ್ರ, ಪುಸ್ತಕ ಹಾರ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾಧ್ಯಕ್ಷೆ ರುಬೀನ ಎಂ. ಎ ಹಾಗೂ ಕಾರ್ಯದರ್ಶಿ ನಿವ್ಯಾ ಕಾವೇರಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.