ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ 35 ವರ್ಷಗಳಿಂದ ಕಠಿಣ ಪರಿಶ್ರಮದಿಂದ ನಿರಂತರವಾಗಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಯಕ್ಷಗಾನ ಹೀಗೆ ಹತ್ತು ಹಲವು ಹೊಸ ಹೊಸ ಪರಿಕಲ್ಪನೆಯ ಸಾಂಸ್ಕೃತಿಕ ಚಟುವರಿಕೆಗಳನ್ನು ನಡೆಸುತ್ತಾ ಬಂದಿದ್ದು ಈ ಸಂಸ್ಥೆಯ ಕುರಿತಂತೆ ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಲೇಖನದ ಮೂಲಕ ವ್ಯಕ್ತಪಡಿಸಬಹುದು ಎಂದು ಕಲಾಕುಂಚ
ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಈಗಾಗಲೇ 1991 ರಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಅವರವರ ಶಾಲೆಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಉಚಿತ ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದ್ದು ಸುಮಾರು 37 ಸಾವಿರ ಮಕ್ಕಳಿಗೆ ಕನ್ನಡದಲ್ಲಿ ಹೆಚ್ಚು ಅಂಕ ಪಡೆದವರಿಗೆ “ಕನ್ನಡ ಕುವರ-ಕುವರಿ” “ಕನ್ನಡ ಕೌಸ್ತುಭ”, “ಸರಸ್ವತಿ ಪುರಸ್ಕಾರ” ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೃಂಭಣೆಯಿಂದ ಗೌರವಿಸಿ ವಿತರಿಸಿದ್ದು ಪ್ರಶಸ್ತಿ ಪುರಸ್ಕೃತರಾದ ಮಕ್ಕಳು, ಅವರ ಪೋಷಕರು, ಈ ಸಂಸ್ಥೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ “ಸುವರ್ಣ ಕರ್ನಾಟಕ ಕಣ್ಮಣಿ”, “ಕರ್ನಾಟಕ ಮುಕುಟ ಮಣಿ” ರಾಜ್ಯ ಪ್ರಶಸ್ತಿಗಳಿಗೆ ಭಾಜನರಾದ ಸಾಧಕರು ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಅಥವಾ ಈ- ಮೇಲ್ ಮಾಡಿ ಲೇಖನಗಳನ್ನು ಕನ್ನಡದಲ್ಲಿ ತಮ್ಮ ತಮ್ಮ ವಿಳಾಸ, ಊರಿನ ಪಿನ್‌ಕೋಡ್ ನಂಬರ್, ವ್ಯಾಟ್ಸಪ್ ಸಂಖ್ಯೆಯೊಂದಿಗೆ ಕಳಿಸಬಹುದು.
“ಕುಂಚ ಕೈಪಿಡಿ” ಎಂಬ ಪುಸ್ತಕವನ್ನು ಮುದ್ರಣಕ್ಕೆ ಸಿದ್ದತೆ ಮಾಡಿಕೊಂಡಿದ್ದು ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.
ಉಚಿತ ಲೇಖನ ಬರೆದು ಕಳಿಸುವ ವ್ಯಾಟ್ಸಪ್ ಸಂಖ್ಯೆ ಇಮೇಲ್ ಮಾಡಿ.
9844790543