ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ,ಕೇರಳ ರಾಜ್ಯ ಘಟಕ ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27 ರಂದು ನಡೆಯುವ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ, ರಾಜ್ಯಮಟ್ಟದ ವಿದ್ಯಾರ್ಥಿ ಚುಟುಕು ಕವಿಗೋಷ್ಠಿ, ರಾಜ್ಯಮಟ್ಟದ ಚುಟುಕು ಕಥಾಗೋಷ್ಠಿಯಲ್ಲಿ ಭಾಗವಹಿಸುವ ಕವಿ ಸಾಹಿತಿಗಳಿಗೆ ಪುಸ್ತಕ ಕೊಡುಗೆ ನೀಡುವುದಕ್ಕಾಗಿ ಸಾಹಿತ್ಯ ಕೃತಿಗಳನ್ನು ಉದಾರವಾಗಿ ನೀಡುವಂತೆ ಭಿನ್ನವಿಸಿಕೊಳ್ಳಲಾಗಿದೆ. ಕೇರಳ ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ನೆಲೆಸಿ ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಹೆಮ್ಮೆಯ ಕವಿ ಸಾಹಿತಿ ಲೇಖಕ ಬರಹಗಾರ ಪ್ರಕಾಶಕ ಹಾಗೂ ಕಲಾವಿದರು ಮಾಧ್ಯಮದವರು ಮತ್ತು ಸಾಹಿತ್ಯ ಕ್ಷೇತ್ರದ ಪೋಷಕರು ಸಾಹಿತ್ಯ ಅಭಿಮಾನಿಗಳು ಕನ್ನಡ ಅಭಿಮಾನಿಗಳು ತಮ್ಮಲ್ಲಿರುವ ಹೆಚ್ಚುವರಿ ಸಾಹಿತ್ಯ ಕೃತಿಗಳನ್ನು ಉದಾರವಾಗಿ ನೀಡಿ ಪ್ರೋತ್ಸಾಹಿಸುವಂತೆ ವಿನಂತಿಸಲಾಗಿದೆ.
ತಾವು ನೀಡಿದ ಪುಸ್ತಕ ಕೊಡುಗೆಗಳನ್ನು ಸಮ್ಮೇಳನದಲ್ಲಿ ಭಾಗವಹಿಸಿದ ಕವಿಗಳು, ಸಾಹಿತಿಗಳು ,ಮುಖ್ಯ ಅತಿಥಿಗಳು , ಕನ್ನಡ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಉಚಿತವಾಗಿ ಪುಸ್ತಕದಾನ ನೀಡಿದ ಮಹನೀಯರ ಹೆಸರನ್ನು ಪ್ರಸ್ತಾಪಿಸಿ ಸಾಹಿತ್ಯ ಪುಸ್ತಕಗಳನ್ನು ನೀಡಲು ಉದ್ದೇಶಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಆಯ್ದ 60 ಕನ್ನಡ ಶಾಲಾ ಕಾಲೇಜು ಗ್ರಂಥ ಭಂಡಾರಕ್ಕೆ ತಾವು ಉದಾರವಾಗಿ ನೀಡಿದ ಸಾಹಿತ್ಯ ಕೃತಿಗಳನ್ನು ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು. ತಮ್ಮಲ್ಲಿರುವ ಹಳೆಯ, ಹೊಸ, ಅಮೂಲ್ಯ ಸಾಹಿತ್ಯ ಕೃತಿಗಳು ತಮ್ಮ ಮನೆಯಲ್ಲಿ ಸ್ಥಳವಕಾಶದ ಕೊರತೆಯಿಂದ ದಾಸ್ತಾನ ಇಟ್ಟವರಿಗೆ ಈ ಪುಸ್ತಕ ದಾನ ಯೋಜನೆಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬಹುದು. ತಾವು ಉದಾರವಾಗಿ ನೀಡಿದ ಸಾಹಿತ್ಯ ಕೃತಿಗಳಿಗೆ ಕೃತಜ್ಞತಾ ಪತ್ರ ನೀಡಿ ಗೌರವಿಸಲಾಗುವುದು. ಸಾಹಿತ್ಯ ಪೋಷಕರು ಸಾಹಿತ್ಯ ಪ್ರೋತ್ಸಾಹಕರು ಪುಸ್ತಕ ದಾನಿಗಳು ಶಿವರಾಮ ಕಾಸರಗೋಡು ಅಧ್ಯಕ್ಷರು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕನ್ನಡ ಗ್ರಾಮ ಕನ್ನಡ ಗ್ರಾಮ ರಸ್ತೆ ಕಾಸರಗೋಡು -671121
ಮೊಬೈಲ್:9448572016,9901951965
ಇವರನ್ನು ಸಂಪರ್ಕಿಸಿ ಪುಸ್ತಕದಾನದ ಮಾಹಿತಿ ನೀಡಬಹುದು.
ಕಾಸರಗೋಡು ಜಿಲ್ಲೆಯ ಕನ್ನಡದ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲು ವಿಭಾಗದ ಕನ್ನಡ ಮಕ್ಕಳಿಗೆ ಪುಸ್ತಕಜ್ಞಾನದ ಹವ್ಯಾಸವನ್ನು ಬೆಳೆಸುವುದಕ್ಕಾಗಿ ರಾಜ್ಯದ ಕವಿ ಸಾಹಿತಿ ಲೇಖಕರು ಬರಹಗಾರರು ಪ್ರಕಾಶಕರು ಸಂಘ ಸಂಸ್ಥೆಗಳು ಕರ್ನಾಟಕ ಸರಕಾರದ ವಿವಿಧ ಅಕಾಡೆಮಿಗಳು ಕನ್ನಡ ಪುಸ್ತಕ ಪ್ರಾಧಿಕಾರ ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಗಳು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ರಾಜ್ಯದ ವಿವಿಧ ಮಠ ಆಶ್ರಮ ದೇವಸ್ಥಾನಗಳು ಈ ಪುಸ್ತಕದಾನದ ಯೋಜನೆಗೆ ಸಾಹಿತ್ಯ ಕೃತಿಗಳೊಂದಿಗೆ ತಮ್ಮ ಉದಾರವಾದ ಆರ್ಥಿಕ ಸಹಕಾರವನ್ನು ದೇಣಿಗೆಯ ರೂಪದಲ್ಲಿ ನೀಡುವ ಮೂಲಕ ಈ ಬೃಹತ್ ಪುಸ್ತಕ ದಾನ ಯೋಜನೆಗೆ ಪ್ರೋತ್ಸಾಹಿಸಬಹುದು.
ರಾಜ್ಯದಲ್ಲಿರುವ ಕವಿ ಸಾಹಿತಿ ಲೇಖಕ ಪ್ರಕಾಶಕರು ಪ್ರಕಟಿಸಿದ ಕಥಾಸಂಕಲನ ಕವನ ಸಂಕಲನ ಲೇಖನಗಳ ಮೂಲಕ ಕನ್ನಡ ಸಾಹಿತ್ಯ ವಲಯದಲ್ಲಿ ಈಗಾಗಲೇ ಗುರುತಿಸಿಕೊಂಡಿರುವವರು, ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಥೆ ಕವನ ಲೇಖನ ಲಲಿತ ಪ್ರಬಂಧ ಚುಟುಕುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ಈ ಪುಸ್ತಕ ದಾನ ಯೋಜನೆಯಲ್ಲಿ ನಮ್ಮೊಂದಿಗೆ ಕೈಜೋಡಿಸಲು ಅವಕಾಶ ನೀಡಲಾಗುವುದು.
ಶಿವರಾಮ ಕಾಸರಗೋಡು ಅಧ್ಯಕ್ಷರು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕನ್ನಡ ಗ್ರಾಮ ಕನ್ನಡ ಗ್ರಾಮರಸ್ತೆ ಕಾಸರಗೋಡು- 671121
ಮೊಬೈಲ್: 9448572016
ಈ ಪುಸ್ತಕದಾನ ಯೋಜನೆಗೆ ಧನಸಹಾಯ ನೀಡಿ ಪ್ರೋತ್ಸಾಹಿಸುವವರು google pay ಸಂಖ್ಯೆ 9448572016 ಇವರಿಗೆ ಪಾವತಿಸಿ ಪ್ರೋತ್ಸಾಹಿಸಬಹುದು.
ಮಂಗಳೂರು ವಿಳಾಸ:
ಶಿವರಾಮ ಕಾಸರಗೋಡು ಅಧ್ಯಕ್ಷರು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಶ್ರೀ ಮಹಾಮಾಯಾ ,ವೈದ್ಯನಾಥ ನಗರ 1ನೇ ಮುಖ್ಯ ಅಡ್ಡರಸ್ತೆ ಮಾಡೂರು ಅಂಚೆ ಕೋಟೆ ಕಾರು 575022 ಉಳ್ಳಾಲ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಮೊಬೈಲ್:9448572016
ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕವಿ ಸಾಹಿತಿಗಳಿಗೆ ನೀಡಲು ಪುಸ್ತಕ ಹಬ್ಬ ,ಪುಸ್ತಕದಾನ, ಶ್ರೇಷ್ಠದಾನ ಯೋಜನೆಯಲ್ಲಿ ಪುಸ್ತಕಗಳ ಕೊಡುಗೆಗಳಿಗೆ ಆಹ್ವಾನ
RELATED ARTICLES