ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ 35ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಉಚಿತವಾಗಿ “ಕಾರ್ಡಿನಲ್ಲಿ ಕಥೆ” ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಸಾಹಿತ್ಯಾಸಕ್ತರು 50 ಪೈಸೆ ಅಂಚೆ ಕಾರ್ಡಿನಲ್ಲಿ ತಮ್ಮ ತಮ್ಮ ವಿಷಯ ಆಯ್ಕೆಯೊಂದಿಗೆ ಸಂಕ್ಷಿಪ್ತ ಕಥೆಯನ್ನು ಬರೆದು ತಮ್ಮ ಹೆಸರು ಮನೆಯ ವಿಳಾಸ ವ್ಯಾಟ್ಸಪ್ ಸಂಖ್ಯೆ ಕನ್ನಡದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ 31-01- 2025 ರೊಳಗೆ ಅಂಚೆಯ ಮೂಲಕ ಕಳಿಸಬೇಕೆಂದು ತೀರ್ಪುಗಾರರಲ್ಲಿ ಒಬ್ಬರಾದ ಹೇಮಾ ಶಾಂತಪ್ಪ ಪೂಜಾರಿ ಪ್ರಕಟಿಸಿದ್ದಾರೆ.
ಆಂಗ್ಲಭಾಷೆಯಲ್ಲಿ ವಿಳಾಸ ಹಾಕಿದರೆ ಸ್ವೀಕರಿಸುವುದಿಲ್ಲ. 50 ಪೈಸೆ ಅಂಚೆ ಕಾರ್ಡಿನಲ್ಲಿ ಕಥೆ ಬರೆದು ಕಳಿಸುವ ವಿಳಾಸ “ಕೌಸ್ತುಭ’ #864/14, 2ನೇ ತಿರುವು,
ಸರಸ್ವತಿ ಬಡಾವಣೆ, ‘ಬಿ’ ಬ್ಲಾಕ್, ದಾವಣಗೆರೆ-577005.
ಯಾವುದೇ ಸಭೆ, ಸಮಾರಂಭ ಇರುವುದಿಲ್ಲ, ಬಹುಮಾನ ವಿಜೇತರಿಗೆ ಮಾತ್ರ ಫಲಿತಾಂಶ ಅಭಿನಂದನಾ ಪತ್ರ ಸ್ಪರ್ಧಿಗಳು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಕಳಿಸಲಾಗುವುದು. ಹೆಚ್ಚಿನ ಮಾಹಿತಿಗೆ 9743897578 ಈ ಸನೀಹವಾಣಿಗೆ ಸಂಪರ್ಕಿಸಬಹುದೆಂದು ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಣೆಗೆ ತಿಳಿಸಿದ್ದಾರೆ.