ಮಂಗಳೂರಿನ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಇವರು ನವಂಬರ್ 8 ರಂದು ಮಂಗಳೂರು ನಗರದಲ್ಲಿ ಆಯೋಜಿಸಿರುವ ಸಾಧನಾ ರಾಜ್ಯ ಪ್ರಶಸ್ತಿ, ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ ಮತ್ತು ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರ ಪ್ರದಾನ ಸಮಾರಂಭದ ಪ್ರಯುಕ್ತ ‘ದಶಾವತಾರ’ ಎಂಬ ನೂರೊಂದು ಕವಿಗಳ ರಾಜ್ಯಮಟ್ಟದ ಕವಿಗೋಷ್ಠಿಗೆ ಕವಿಗಳನ್ನು ಆಹ್ವಾನಿಸಿದೆ.ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವ ರಾಜ್ಯದ ಕವಿ ಕವಯತ್ರಿಯರು ತಮ್ಮ ಹೆಸರನ್ನು ಅಕ್ಟೊಬರ್ 2ರ ಒಳಗಾಗಿ ನೋಂದಾಯಿಸಿಕೊಳ್ಳಬಹುದು.ನೂರೊಂದು ಕವಿಗಳನ್ನೂ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ.

ಆಸಕ್ತರು ತಮ್ಮ ಹೆಸರನ್ನು 9535656805 ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಕವಿಗೋಷ್ಠಿಯ ಸಂಚಾಲಕಿ ಶ್ರೀಮತಿ ಗೀತಾ ಲಕ್ಷ್ಮೀಶ್ ಅವರನ್ನು ಸಂಪರ್ಕಿಸಲು ಟ್ರಸ್ಟ್ ಅಧ್ಯಕ್ಷರಾದ ಕಾ.ವೀ. ಕೃಷ್ಣದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.