ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸಂಕ್ರಾಂತಿ ಪ್ರಯುಕ್ತ ಜ.14ರಂದು ಕಲಾಕುಂಚ ಕಚೇರಿ ಸಭಾಂಗಣದಲ್ಲಿ ಸಂಕ್ರಾಂತಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಅವಕಾಶ ವಂಚಿತ ಹಿರಿಯ, ಕಿರಿಯ, ನವಯುವ ಕವಿ, ಕವಯತ್ರಿಯರಿಗೆ ಮುಕ್ತವಾದ ಅವಕಾಶ ಕಲ್ಪಿಸಿ
ಅವರಲ್ಲಿರುವ ಸಾಹಿತ್ಯ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ ಆಯೋಜಿಸಲಾದ ಈ
ಕವಿಗೋಷ್ಠಿಯಲ್ಲಿ ಭಾಗವಹಿಸವವರು ಡಿ. 31ರೊಳಗೆ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ತಮ್ಮ
ವ್ಯಾಟ್ಸಪ್ ಸಂಖ್ಯೆಯೊಂದಿಗೆ ಹೆಸರು ನೊಂದಾಯಿಸಬೇಕಾಗಿ ಈ ಕವಿಗೋಷ್ಠಿಯ ಸಂಯೋಜಕರಾದ ಹೇಮಾ ಶಾಂತಪ್ಪ ಪೂಜಾರಿ ವಿನಂತಿಸಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದವರಿಗೆ ಅಭಿನಂದನಾ ಪತ್ರ ಹಾಗೂ ಕವನ ಸಂಕಲನ ವಿತರಿಸಲಾಗುವುದು ಹೆಸರು ನೊಂದಾಯಿಸುವ ವ್ಯಾಟ್ಸಪ್ ಸಂಖ್ಯೆ ೯೭೪೩೮೯೭೫೭೮.