ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ “ಕಾವ್ಯ ಕುಂಚ” ಕವನ ಸಂಕಲನ ಈಗಾಗಲೇ ಒಂದರಿಂದ ಐದು ಭಾಗದ ಕವನ ಸಂಕಲನ ಲೋಕಾರ್ಪಣೆಯಾಗಿದ್ದು 6ನೇ ಕವನ ಸಂಕಲನಕ್ಕೆ ಪೂರ್ಣ ಪ್ರಮಾಣದ ಸಿದ್ಧತೆ ಮಾಡುತ್ತಿದ್ದೇವೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.
ಕವನ ರಚಿಸಿ ಕಳಿಸುವ ಆಸಕ್ತರು 15 ರಿಂದ 20 ಸಾಲುಗಳ ಒಂದು ಕವನ ರಚಿಸಿ ತಮ್ಮ ಆಕರ್ಷಕವಾದ ಒಂದೊಳ್ಳೆಯ ಭಾವಚಿತ್ರ ಮನೆಯ ಪೂರ್ಣ ಪ್ರಮಾಣದ ವಿಳಾಸ ವ್ಯಾಟ್ಸಪ್ ನಂಬರನ್ನು ಈ ಕೆಳಗಿನ ವ್ಯಾಟ್ಸಪ್ ನಂಬರ್‌ಗೆ ಕಳಿಸಬಹುದು. ವಿಷಯ ಆಯ್ಕೆ ಅವರವರದು. 6ನೇ ಕವನ ಸಂಕಲನ ಲೋಕಾರ್ಪಣೆ ದಿನಾಂಕ ನಿಗದಿಯಾದ ಮೇಲೆ ತಮ್ಮ ತಮ್ಮ ವಿಳಾಸಕ್ಕೆ ಆಹ್ವಾನ ಪತ್ರಿಕೆ ಕಳಿಸುತ್ತೇವೆ. ಅಂದು ರಾಜ್ಯ ಮಟ್ಟದ ಕವಿಗೋಷ್ಠಿಗೆ ಅವಕಾಶ ಕೊಡುತ್ತೇವೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ. ಕವನ ಕಳಿಸುವ ಮತ್ತು ಹೆಚ್ಚಿನ ಮಾಹಿತಿಗೆ 9538732777 ಈ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು.