Tuesday, April 22, 2025
Homeಕುಂದಾಪುರಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಕುಂದಾಪುರ ತಾಲೂಕು ಪದಗ್ರಹಣ ಕಾರ್ಯಕ್ರಮ

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಕುಂದಾಪುರ ತಾಲೂಕು ಪದಗ್ರಹಣ ಕಾರ್ಯಕ್ರಮ

ದಿನಾಂಕ 09.03.2025 ರಂದು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಕುಂದಾಪುರ ತಾಲೂಕು ಪದಗ್ರಹಣ, ಧ್ವನಿ ಮ್ಯೂಸಿಕಲ್ ಸಾಂಸ್ಕೃತಿಕ ಕಲರವ, 1200ನೇ ಸಂಚಿಕೆ ಸಂಭ್ರಮ ಕುಂದಾಪುರ ಕಲಾವಿದ-ಕವನ ಕವಿಗೋಷ್ಠಿ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಕುಂದಾಪುರದ ಜೇಸಿ ಭವನದಲ್ಲಿ ಜರುಗಿತು.

ಕುಂದಾಪುರ ತಾಲೂಕು ಪದಗ್ರಹಣ ಸಂದರ್ಭದಲ್ಲಿ ಎಲ್ಲಾ ಗೌರವಾನ್ವಿತ ಗಣ್ಯರ ಸಮ್ಮುಖದಲ್ಲಿ ಆಮಂತ್ರಣ ಕುಂದಾಪುರ ತಾಲೂಕಿನ ಅಧ್ಯಕ್ಷರಾದ ಉದಯ್ ಮೋಹಿತಾ ಹಂಗಳೂರು, ಉಪಾಧ್ಯಕ್ಷರಾದ ಯಶೋದಾ ಗಾಣಿಗ ಮೊಗೆಬೆಟ್ಟು, ಮಧುಕರ ಆಚಾರ್ಯ ಕೋಟೇಶ್ವರ, ಕಾರ್ಯದರ್ಶಿಯಾದ ಸರಸ್ವತಿ ಕೋಟೇಶ್ವರ, ಕೋಶಾಧಿಕಾರಿಯಾದ ಪ್ರಮೀಳಾ ಪೂಜಾರಿ ಕುಂದಾಪುರ, ಕಾರ್ಯಕ್ರಮ ಆಯೋಜಕರಾದ ನಾಗರತ್ನ ಅತ್ತಿಮನೆ ಮೊಗೆರಿ ಬೈಂದೂರು ಹಾಗೂ ಚಂದ್ರಿಕಾ ಆರ್ ಬಾಯರಿ ಕುಂದಾಪುರ ಇವರುಗಳಿಗೆ ಪದಗ್ರಹಣವನ್ನು ಮಾಡಲಾಯಿತು. ಮಾಧ್ಯಮ ಪ್ರತಿನಿಧಿಯಾಗಿ ರಾಮಶೆಟ್ಟಿ ಕುಂದಾಪುರ ಆಗಮಿಸಿದ್ದರು.

ವೇದಿಕೆಯಲ್ಲಿ ಆಮಂತ್ರಣ ಪರಿವಾರದ ವಿಜಯ್ ಕುಮಾರ್ ಜೈನ್ ಇವರು ಪ್ರಮಾಣ ವಚನ ಭೋದನೆ ಮಾಡಿದರು. ಅಧ್ಯಕ್ಷತೆಯನ್ನು ಆಮಂತ್ರಣ ಕುಂದಾಪುರ ತಾಲೂಕಿನ ಅಧ್ಯಕ್ಷರಾದ ಉದಯ್ ಮೋಹಿತಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿ ಚಾರಿಟೇಬಲ್ ಟ್ರಸ್ಟ್ ನಾ ಅಧ್ಯಕ್ಷರಾದ ಗೋಪಾಲ ಆಚಾರಿಯವರು, ಕುಂದಾಪುರ ಮಾಜಿ ಪುರಸಭಾ ಸದಸ್ಯರಾದ ರತ್ನಾಕರ್ ರವರು, ಉತ್ತಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಕೆ. ಆರ್. ನಾಯಕ್ ಹಂಗಳೂರು ಆಗಮಿಸಿದ್ದರು ಹಾಗೂ ಪುಷ್ಪ ಪ್ರಸಾದ್ ಉಡುಪಿ ಜಿಲ್ಲಾ ಆಮಂತ್ರಣ ವೇದಿಕೆಯ ಅಧ್ಯಕ್ಷರು ಹಾಗೂ ನಿರೀಕ್ಷಿತಾ ದ. ಕ. ಜಿಲ್ಲಾ ಆಮಂತ್ರಣ ಅಧ್ಯಕ್ಷರು ಹಾಗೂ ಆರ್ ಜೆ ಇಂದ್ರ ಮುಖ್ಯಸ್ಥರು, ಕುಂದಾಪುರ ಕಲಾವಿದ ಇವರು ಮುಖ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ಥಳದಲ್ಲಿ ವಿಷಯ ನೀಡಿ ಕವನ ಬರೆಸಿ ವಾಚನ ಮಾಡುವ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಕವನ ಸ್ಪರ್ಧೆಯ ತೀರ್ಪುಗಾರರಾಗಿ ವಿನೋದ್ ಕುಂಪಲ ಹಾಗೂ ಪುಷ್ಪ ಪ್ರಸಾದ್ ಉಡುಪಿ ಇವರು ಕವನ ಸ್ಪರ್ಧೆಯ ತೀರ್ಪು ಕೊಟ್ಟರು. ಕವನ ಸ್ಪರ್ಧೆಯಲ್ಲಿ ಸುಮಾರು 30-35 ಕವಿ-ಕವಯಿತ್ರಿಯರು ಭಾಗವಹಿಸಿದ್ದರು. ಕವನ ಸ್ಪರ್ಧೆಯಲ್ಲಿ ಮಂಜುನಾಥ್ ಗುಂಡ್ಮಿಯವರು ಪ್ರಥಮ ಸ್ಥಾನ ಪಡೆದು ಕವಿರತ್ನ ಪುರಸ್ಕಾರ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಸೌದಾಮಿನಿ ರಾವ್ ಹಾಗೂ ತೃತೀಯ ಸ್ಥಾನವನ್ನು ಅಮೃತ ಸಂದೀಪ್ ಇವರು ಪಡೆದುಕೊಂಡರು.

ಮಾಲತಿ ರಮೇಶ್ ಕೆಮ್ಮಣ್ಣು, ಶಾಲಿನಿ ಕೆಮ್ಮಣ್ಣು, ಅನುರಾಧ ಉದಯ್, ಸರಿತಾ ಅಂಬರೀಷ್, ಶೋಭಾ ದಿನೇಶ್ ಇವರುಗಳು ಮೆಚ್ಚುಗೆಯ ಪುಸ್ತಕ ಬಹುಮಾನ ಪಡೆದುಕೊಂಡರು. ಧ್ವನಿ ಮ್ಯೂಸಿಕಲ್ ಸಾಂಸ್ಕೃತಿಕ ಕಲರವ ಹಾಗೂ ಕುಂದಾಪುರ ಕಲಾವಿದರು ನೃತ್ಯ ಹಾಗೂ ಗಾಯನದ ಮೂಲಕ ಎಲ್ಲರನ್ನು ರಂಜಿಸಿದರು. ಆರ್ ಜೆ ಇಂದ್ರ ಸಾರಥ್ಯದ ಕುಂದಾಪ್ರ ಕಲಾವಿದ ತಂಡದಿಂದ ವಿಜಯ್ ಕುಮಾರ್ ಜೈನ್ ಹಾಗೂ ವಿನೋದ್ ಕುಂಪಲ ಇವರಿಗೆ ಕಲಾಭೂಷಣ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಲ್ಲಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲಾವಿದರಿಗೆ ಅವಕಾಶ ಕಲ್ಪಿಸಿ ವೇದಿಕೆಯನ್ನು ನೀಡಿ ಗೌರವ ಸಲ್ಲಿಸಲಾಯಿತು. ಆರ್ ಜೆ ಇಂದ್ರರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

RELATED ARTICLES
- Advertisment -
Google search engine

Most Popular