ದ. ಕ. ಜಿ. ಪಂ ಹಿ ಪ್ರಾ. ಶಾಲೆ ಮಾಣಿ ಇಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಘಟಕದಿಂದ ಅನಾವರಣ ವಿಶೇಷ ಸ್ಪರ್ಧೆ ಕಾರ್ಯಕ್ರಮವು ದಿನಾಂಕ 09-01.2025 ರಂದು ನಡೆಯಿತು. ಮಾಣಿ ಪಂಚಾಯತಿನ ಅಧ್ಯಕ್ಷರಾದ ಸುದೀಪ್ ಶೆಟ್ಟಿ ಕೊಡಾಜೆ ದೀಪ ಪ್ರಜ್ವಲನೆ ಮಾಡಿ ಹಾರೈಸಲಾಗಿ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಪಂಚಾಯತ್ ಸದಸ್ಯ ಮೆಲ್ವಿನ್, ಸಮೂಹ ಸಂಪನ್ಮೂಲ ವ್ಯಕ್ತಿಯಾದ ಸತೀಶ್ ರಾವ್ , ಮುಖ್ಯ ಶಿಕ್ಷಕಿಯಾದ ಚಂದ್ರಾವತಿ, ಆಮಂತ್ರಣ ಪರಿವಾರದ ಸಂಸ್ಥಾಪಕರಾದ ವಿಜಯಕುಮಾರ್ ಜೈನ್, ಬಂಟ್ವಾಳ ಘಟಕದ ಅಧ್ಯಕ್ಷ ರಶ್ಮಿತಾ ಸುರೇಶ್ ಜೋಗಿಬೆಟ್ಟು, ರಾಜ್ಯ ಸದಸ್ಯರಾದ HK ನಯನಾಡು, ಪದಾಧಿಕಾರಿಗಳಾದ ರಾಕೇಶ್, ಹಿತೇಶ್, ಸುಚಿತ್ರ ಭಟ್ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದು ಶುಭಹಾರೈಸಿದರು. ವಿದ್ಯಾರ್ಥಿಗಳಿಗೆ ಕಲಿಕಾ ಸ್ಪಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಜಿಲ್ಲಾ ಉಪಾಧ್ಯಕ್ಷರಾದ ವಿಂಧ್ಯಾ ಎಸ್ ರೈ ಕಡೇಶಿವಾಲಯ ಪ್ರಾಸ್ತವಿಕ ಮಾತನ್ನಾಡಿ, ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸ್ವಾಗತಿಸಿ, ವಂದಿಸಿ, ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು
ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಘಟಕದಿಂದ ಅನಾವರಣ ವಿಶೇಷ ಸ್ಪರ್ಧೆ ಕಾರ್ಯಕ್ರಮ
RELATED ARTICLES