Tuesday, December 3, 2024
HomeUncategorizedಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ತಯಾರಿಕೆ; 10 ಬಿಲಿಯನ್ ಡಾಲರ್​ಗೂ ಅಧಿಕ...

ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ತಯಾರಿಕೆ; 10 ಬಿಲಿಯನ್ ಡಾಲರ್​ಗೂ ಅಧಿಕ ಸ್ಮಾರ್ಟ್​ಫೋನ್ ರಫ್ತು

ಭಾರತದಲ್ಲಿ ಐಫೋನ್​ಗಳನ್ನು ಹೆಚ್ಚೆಚ್ಚು ತಯಾರಿಸುತ್ತಿರುವ ಆ್ಯಪಲ್ ಸಂಸ್ಥೆ ಈಗ ಮತ್ತೊಂದು ಮೈಲಿಗಲ್ಲು ಮುಟ್ಟಿದೆ. ಈ ಹಣಕಾಸು ವರ್ಷದಲ್ಲಿ ಅಕ್ಟೋಬರ್ ತಿಂಗಳವರೆಗೆ ಅದು ತಯಾರಿಸಿದ ಐಫೋನ್​ನ ಎಫ್​ಒಬಿ ಮೌಲ್ಯ 10 ಬಿಲಿಯನ್ ಡಾಲರ್ ಆಗಿದೆ. ಅಂದರೆ, ಏಪ್ರಿಲ್​ನಿಂದ ಅಕ್ಟೋಬರ್​ವರೆಗಿನ ಏಳು ತಿಂಗಳ ಅವಧಿಯಲ್ಲಿ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳ ತಯಾರಿಕೆ ಆಗಿವೆ. ಕೇಂದ್ರ ಸಚಿವ ಅಶ್ವನಿ ವೈಷ್ಣವ್ ಈ ವಿಚಾರವನ್ನು ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

2023-24ರ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 37ರಷ್ಟು ಐಫೋನ್ ಪ್ರೊಡಕ್ಷನ್ ಹೆಚ್ಚಾಗಿದೆ. ಇದು ಭಾರತದಲ್ಲಿ ಆ್ಯಪಲ್ ಇರುವಿಕೆ ಇನ್ನಷ್ಟು ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಏಪ್ರಿಲ್​ನಿಂದ ಅಕ್ಟೋಬರ್​​ವರೆಗೆ ತಯಾರಾದ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ನಲ್ಲಿ ಏಳು ಬಿಲಿಯನ್ ಮೌಲ್ಯದ ಫೋನ್​ಗಳನ್ನು ರಫ್ತು ಮಾಡಲಾಗಿದೆ. ಮೂರು ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳು ಭಾರತೀಯ ಮಾರುಕಟ್ಟೆಗೆ ವಿತರಣೆ ಆಗಿವೆ. ಭಾರತದಲ್ಲಿ ತಯಾರಾದ ಐಫೋನ್​ನಲ್ಲಿ ಶೇ. 70ರಷ್ಟನ್ನು ರಫ್ತು ಮಾಡಿದಂತಾಗಿದೆ.

ತಮ್ಮ ಎಕ್ಸ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಅಶ್ವನಿ ವೈಷ್ಣವ್, ಸರ್ಕಾರ ತಂದಿರುವ ಪಿಎಲ್​ಐ ಸ್ಕೀಮ್​ಗೆ ಕ್ರೆಡಿಟ್ ನೀಡಿದ್ದಾರೆ.

‘ಏಳು ತಿಂಗಳಲ್ಲಿ ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್​ಗೆ ಮತ್ತೊಂದು ಮೈಲಿಗಲ್ಲು ಬಂದಿದೆ. ಆ್ಯಪಲ್​ನಿಂದ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳ ತಯಾರಿಕೆ ಆಗಿದೆ. ಇದರಲ್ಲಿ 7 ಬಿಲಿಯನ್ ಡಾಲರ್ ರಫ್ತಾಗಿದೆ. ಏಳು ತಿಂಗಳಲ್ಲಿ ಭಾರತದ ಒಟ್ಟಾರೆ ಸ್ಮಾರ್ಟ್​ಫೋನ್ ರಫ್ತು 10.6 ಬಿಲಿಯನ್ ಡಾಲರ್​ನ ಗಡಿ ದಾಟಿದೆ,’ ಎಂದು ಕೇಂದ್ರ ಸಚಿವರು ಎಕ್ಸ್​ನಲ್ಲಿ ಬರೆದಿದ್ದಾರೆ.

ಸರ್ಕಾರ 2020ರಲ್ಲಿ ಪಿಎಲ್​ಐ ಸ್ಕೀಮ್ ಜಾರಿಗೆ ತಂದಿದೆ. ಇದು ಉತ್ಪಾದನಾ ಪ್ರಮಾಣ ಆಧಾರಿತ ಉತ್ತೇಜಕ ಯೋಜನೆ. ಆಯ್ದ ಕಂಪನಿಗಳು ಎಷ್ಟು ಮಾಡುವ ಉತ್ಪಾದನೆಗೆ ಅನುಗುಣವಾಗಿ ಹಣದ ರೂಪದಲ್ಲಿ ಸರ್ಕಾರ ಉತ್ತೇಜನ ನೀಡುತ್ತದೆ. ಮ್ಯಾನುಫ್ಯಾಕ್ಚರಿಂಗ್ ವಲಯದಲ್ಲಿ ಸ್ಮಾರ್ಟ್​ಫೋನ್ ಸೆರಿದಂತೆ ಹತ್ತಕ್ಕೂ ಹೆಚ್ಚು ಸೆಕ್ಟರ್​ಗಳಿಗೆ ಪಿಎಲ್​ಐ ಸ್ಕೀಮ್ ಅನ್ನು ಜಾರಿಗೊಳಿಸಲಾಗಿದೆ.

ಹಿಂದೆ ಬಂದ ವರದಿಯೊಂದರ ಪ್ರಕಾರ ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್​ನಿಂದ ಸರ್ಕಾರಕ್ಕೆ ಸಿಕ್ಕಿರುವ ಆದಾಯ 1.10 ಲಕ್ಷ ಕೋಟಿ ರೂ. ಈ ಸ್ಕೀಮ್​ನಲ್ಲಿ ಸರ್ಕಾರ ಹಾಕಿರುವ ಬಂಡವಾಳಕ್ಕೆ ಹೋಲಿಸಿದರೆ, ಅದಕ್ಕೆ ಬಂದಿರುವ ಆದಾಯ 19 ಪಟ್ಟು ಹೆಚ್ಚು ಇದೆ.

RELATED ARTICLES
- Advertisment -
Google search engine

Most Popular